ನಾವು ದಿನನಿತ್ಯ ಆಹಾರದಲ್ಲಿ ಬಳಸುವ ಮೆಂತ್ಯಕಾಳಿನಿಂದ ಸಾಕಷ್ಟು ಉಪಯೋಗವಿದ್ದು ನಮ್ಮ ಅದೇಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಅದಕ್ಕೆ ಪೂರಕವೆಂಬಂತೆ ಹೇಳಬಹುದಾದರೆ ಮೆಂತ್ಯೆಕಾಳು ನೆನೆಸಿದ ನೀರು ಆಯಸ್ಸು ನೂರು ಎನ್ನಬಹುದು. ಕೂತರು, ನಿಂತರು, ಬಗ್ಗಿದರೂ ಕೀಲುಗಳ ನೋವು ಬಾಧಿಸುವವರು ಇತರೆ ಮೂಳೆ ಸಮಸ್ಯೆಗಳ ನಿವಾರಣೆಗೆ ಮೆಂತ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ಎಂತಹ ಆರ್ಥೈಟಿಸ್ ಇದ್ದರೂ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಲೂ ಇದರ ನಿಯಮಿತ ಸೇವನೆ ಅಗತ್ಯ.

ದೇಹದ ಯಾವುದೇ ಭಾಗದಲ್ಲಿ ಊತ ಇದ್ದರೂ ಮೆಂತ್ಯದ ಕಾಳನ್ನು ನೆನೆಸಿ ಅರೆದು ಲೇಪಿಸಿದರೆ ಊತ ಬೇಗ ಕಡಿಮೆಯಾಗುತ್ತದೆ.
ಮೆಂತ್ಯದ ಕಾಳನ್ನು ಹುರಿದು ಅದರ ಜತೆ ಒಣ ದ್ರಾಕ್ಷಿ ಮತ್ತು ಸೈಂಧವ ಉಪ್ಪು ಸೇರಿಸಿ ಸೇವಿಸಿದರೆ ರಕ್ತ ಭೇದಿ ನಿಲ್ಲುತ್ತದೆ.

RELATED ARTICLES  ಬಹು ಉಪಯೋಗಿ ಕಹಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ !

ವಾತ ಹೆಚ್ಚಾಗಿ ಸಂಧಿಗಳಲ್ಲಿ ನೋವಿದ್ದರೆ ಮೆಂತ್ಯ ಸೊಪ್ಪಿಗೆ ಎಳ್ಳೆಣ್ಣೆ ಮತ್ತು ಸೈಂಧವ ಉಪ್ಪನ್ನು ಬೆರೆಸಿ ಚಿನ್ನಾಗಿ ಹುರಿದು ಬಟ್ಟೆಯಲ್ಲಿ ಕಟ್ಟಿ , ನೋವಿರುವ ಸಂಧಿಗಳಿಗೆ ಬಿಸಿ ಬಿಸಿ ಶಾಖ ಕೊಟ್ಟರೆ ನೋವು ಮತ್ತು ವಾತ ಕಡಿಮೆಯಾಗುತ್ತವೆ.

ಪ್ರತಿ ದಿನ ಮೆಂತ್ಯದ ಬೀಜದ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿದರೆ ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನಂಶ ಕರಗುತ್ತದೆ.
ಮೆಂತ್ಯದ ಬೀಜವನ್ನು ನೆನೆಸಿ ಬೆಲ್ಲದ ಜತೆ ರುಬ್ಬಿ ಹಾಲಿನ ಜತೆ ಸೇರಿಸಿ ಪಾಯಸ ಮಾಡಿ ಕುಡಿದರೆ ಎದೆ ಹಾಲು ಹೆಚ್ಚುತ್ತದೆ.

RELATED ARTICLES  ಚಳಿಗಾಲದ ವ್ಯಾಯಾಮ, ಬೇಡ ವಿರಾಮ

ಮೆಂತ್ಯದ ಕಾಳನ್ನು ತುಪ್ಪದಲ್ಲಿ ಕೆಂಪಾಗಿ ಹುರಿದು ಪುಡಿ ಮಾಡಿ ಅದಕ್ಕೆ ನಿಂಬೆರಸ ಮತ್ತು ಸೈಂಧವ ಉಪ್ಪನ್ನು ಬೆರೆಸಿ ಅನ್ನದ ಮೊದಲ ತುತ್ತಿನಲ್ಲಿ ಸೇವಿಸಿದರೆ ಅಜೀರ್ಣದಿಂದ ಕಾಡುವ ಹೊಟ್ಟೆ ನೋವು ಶಮನವಾಗುತ್ತದೆ.

ನೀರಲ್ಲಿ ನೆನೆಸಿದ ಮೆಂತ್ಯವನ್ನು ಅರೆದು ಅದಕ್ಕೆ ಎಳ್ಳೆಣ್ಣೆ ಬೆರೆಸಿ ಚೆನ್ನಾಗಿ ಕುದಿಸಿ. ಆ ಎಣ್ಣೆಯನ್ನು ಸೋಸಿ ಇಟ್ಟುಕೊಂಡು ಪ್ರತಿ ದಿನ ಕೂದಲಿಗೆ ಹಚ್ಚಿಕೊಂಡರೆ ಕೂದಲು ಚೆನ್ನಾಗಿ ದಟ್ಟವಾಗಿ ಬೆಳೆಯುತ್ತದೆ.

ಮೆಂತ್ಯದ ಎಲೆಗಳನ್ನು ನೀರಲ್ಲಿ ಬೇಯಿಸಿ. ಅದು ತಣ್ಣಗಾದ ಮೇಲೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.