ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್(80ವರ್ಷ) ಅವರು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಾಳೆ ಕಲಬುರಗಿಯ ಜೇವರ್ಗಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಧರಂ ಪುತ್ರ ವಿಜಯ್ ಸಿಂಗ್ ತಿಳಿಸಿದ್ದಾರೆ.
1936ರ ಡಿಸೆಂಬರ್ 25ರಂದು ಧರಂಸಿಂಗ್ ಅವರು ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದಲ್ಲಿ ಜನನ. ಧರಂ ಸಿಂಗ್ ಅವರು ಉಸ್ಮಾನಿಯಾ ಯೂನಿರ್ವಸಿಟಿಯಲ್ಲಿ ಎಂಎ ಹಾಗೂ ಎಲ್ ಎಲ್ ಬಿ ಪದವಿಗಳನ್ನು ಪಡೆದಿದ್ದರು. ಕೆಲ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಧರಂ ಸಿಂಗ್ ಅವರು 60 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.

RELATED ARTICLES  ಬಹುಭಾಷಾ ನಟಿ ರಂಭಾ ಕಾರು ಅಪಘಾತ