ಬೆಂಗಳೂರು:ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮನೆಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಯುವಕನನ್ನು ಜೆಪಿ ನಗರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ನಿನ್ನೆ 9.45ರ ಸುಮಾರಿಗೆ ಮನ್ಸೂರ್ ಎಂಬ ಯುವಕ ಆತನ ಹೆಸರು ಗೋಪಾಲ್ ಎಂದು ಹೇಳಿ ಆತ ಜೆಪಿ ನಗರ ಇನ್ಸ್ಪೆಕ್ಟರ್ ಹಿತೇಂದ್ರ ಅವರಿಗೆ ಕರೆ ಮಾಡಿ ತಾನು ಸಿಎಂ ಮನೆಗೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ವಾನದಳವನ್ನು ಕರೆಸಿ, ಕುಮಾರಸ್ವಾಮಿ ಅವರ ನಿವಾಸದ ಪರಿಶೀಲನೆ ನಡೆಸಿದ್ದರು.

ಆದರೆ ಯಾವುದೇ ಸ್ಫೋಟಕ ವಸ್ತುಗಳು ಪರಿಶೀಲನೆ ವೇಳೆ ಪತ್ತೆಯಾಗದ ಹಿನ್ನೆಲೆಯಲ್ಲಿ ಅದೊಂದು ಹುಸಿ ಕರೆ ಎಂಬುದಾಗಿ ತಿಳಿದು ಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ವ್ಯಕ್ತಿಯ ವಿರುದ್ಧ ದೂರು ದಾಖಲಿಗಿದ್ದು, ಪೊಲೀಸರು ಮನ್ಸೂರ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.