ಯಲ್ಲಾಪುರ ; ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಹಾಗೂ ಗ್ರಾಮೀಣ ಬಾಗದಲ್ಲಿ ನಾಗದೇವತೆ ಮೂರ್ತಿಗಳಿಗೆ, ಹುತ್ತಗಳಿಗೆ ಗುರುವಾರ ಜನ ಕುಟುಂಬ ಸಮೇತ ಹಾಲು ನೀಡಿ ಭಕ್ತಿ ಭಾವ ಮೆರೆದರು.
ನಗರದ ದೇವಿ ದೇವಸ್ಥಾನದ ಹತ್ತಿರದ ನಾಗದೇವತಾ ಮೂರ್ತಿ, ಟಿಳಕ ಚೌಕದ ನಾಗಮೂರ್ತಿ, ಬಸ್ ಸ್ಟಾಂಡ್ ಚೌಡೇಶ್ವರಿ ದೇವಸ್ಥಾನ ಪಕ್ಕದ ನಾಗ ಮೂರ್ತಿ, ನೂತನ ಬಸವೇಶ್ವರರ ದೇವಸ್ಥಾನದ ನಾಗದೇವತೆ ಹೀಗೆ ಹಲವಾರು ಕಡೆಗಳಲ್ಲಿಯ ನಾಗದೇವತೆಯ ಮೂರ್ತಿಗಳನ್ನು ಪೂಜಿಸಲಾಯಿತು. ಗ್ರಾಮೀಣ ಪ್ರದೇಶದ ವಿವಿಧ ಭಾಗಗಳಲ್ಲಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಕೆಲವು ನಾಗರ ಕಟ್ಟೆಗಳಲ್ಲಿ ವಿಶೇಷ ಪೂಜೆಗಳನ್ನು ಎರ್ಪಡಿಸಲಾಗಿತ್ತು.

RELATED ARTICLES  ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಹಕಾರದಿಂದ ಗೋಕರ್ಣದ ಹಲವೆಡೆ 2 ನೇ ಸುತ್ತಿನ ಉಜ್ವಲ ಗ್ಯಾಸ ವಿತರಣೆ