ಕುಮಟಾ: ಗೀತೆ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ, ಸಮಾಧಾನ ನೀಡುತ್ತದೆ. ಕೇವಲ ಬದುಕಲಲ್ಲದೇ ಇಚ್ಛಿತ ಜೀವನ ನಡೆಸಲು ಗೀತೆಯ ಮನನದಿಂದ ಸಾಧ್ಯವೆಂದು ಸಂಸ್ಕøತ ಪಂಡಿತ ಮತ್ತು ಶಿಕ್ಷಕ ಭರತ್ ಭಟ್ಟ ಅಭಿಪ್ರಾಯಪಟ್ಟರು. ಅವರು ಹದಿನೆಂಟೂ ಅಧ್ಯಾಯಗಳ ಸಂಕ್ಷಿಪ್ತ ಸಾರವನ್ನು ಮಕ್ಕಳಿಗೆ ಉಣಬಡಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಶ್ಲೋಕಾರ್ಥವನ್ನೂ ಪಠಣವನ್ನೂ ಸಾದರಪಡಿಸಿದರು.

ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ದಿ.ವಿನಯಾ ಶಾನಭಾಗ ಪ್ರಾಯೋಜಿತ ‘ಗೀತಾ ಜಯಂತಿ’ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಮೇಲೆ ಉಪನ್ಯಾಸ ನಡೆಸಿಕೊಟ್ಟರು. ಉದ್ಘಾಟಕರಾಗಿ ಆಗಮಿಸಿದ ಹೊಲನಗದ್ದೆ ಗ್ರಾ.ಪಂ.ಸದಸ್ಯೆ ರಮ್ಯಾ ಶೇಟ್ ಪ್ರತಿ ಮನೆಯಲ್ಲೂ ಭಗವ್ದಗೀತಾ ಗ್ರಂಥ ಇರಬೇಕು. ಅದನ್ನು ನಿತ್ಯ ಪಠಿಸಬೇಕು. ಅದು ಮನುಕುಲವನ್ನು ಸುಸಂಸ್ಕøತಗೊಳಿಸುತ್ತದೆ ಎಂದು ಅಭಿಪ್ರಾಯಟ್ಟರು. ಈ ನಿಟ್ಟಿನಲ್ಲಿ ನಡೆಸಿದ ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಮುಕ್ತಾ ಭಟ್ಟ, ಕುಮಾರಿ ರಕ್ಷಿತಾ ಪಟಗಾರ ಮತ್ತು ಕುಮಾರ ದರ್ಶನ ಪುರಾಣಿಕ ಗೀತೆಯ ಪಾರಾಯಣ ಮಾಡಿದರು. ಸಂಸ್ಕøತ ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಒಂದೇ ಓದಿಗೆ ಅರ್ಥವಾಗದಿದ್ದರೂ ಚಿಂತೆಯಿಲ್ಲ.

RELATED ARTICLES  ಶ್ರೀಪಾದ ಭಟ್ಟರಿಗೆ 'ಅಭಿನಯ ಭಾರತಿ' ರಂಗ ಪ್ರಶಸ್ತಿ

ಗೀತೆ ಗಣಿತದಂತೆ ಹಲವರಿಗೆ ಕಠಿಣ ಆದರೂ ಬಿಡದೇ ಓದಿ ಕಂಠಪಾಠ ಮಾಡಿದಾಗ ಮುಂದೊಮ್ಮೆ ಅದು ತಂತಾಂನೆ ಅರ್ಥವಾಗುವುದಲ್ಲದೇ ಬಾಳಿಗೆ ದಾರಿ ದೀಪವಾಗುತ್ತದೆ ಎಂದರು. ಕೃಷ್ಣನು ಅರ್ಜುನನಿಗೆ ಯುದ್ಧಮಾಡುವಂತೆ ಪ್ರೇರೇಪಿಸಿದರೆ ಇಂದು ಶಿಕ್ಷಕವರ್ಗದವರು ಅಧ್ಯಯನ ಮಾಡಿ ಎಂದು ತಮ್ಮ ವಿದ್ಯಾರ್ಥಿಗಳಿಗೆ ಹುರಿದುಂಬಿಸಬೇಕಾಗಿ ಬಂದ ಹೋಲಿಕೆಯನ್ನು ನೀಡಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿ ವಂದಿಸಿದರು. ಶಿಕ್ಷಕರಾದ ಎಲ್.ಎನ್.ಅಂಬಿಗ, ಎಸ್.ಪಿ.ಪೈ, ಅನಿಲ್ ರೊಡ್ರಿಗಸ್, ಪ್ರದೀಪ ನಾಯ್ಕ, ಕೆ.ಎಸ್.ಅನ್ನಪೂರ್ಣ, ನಾಗರತ್ನಾ ಭಂಡಾರಿ ಉಪಸ್ಥಿತರಿದ್ದರು. ಪ್ರಶಾಂತ ಗಾವಡಿ ಸಹಕರಿಸಿದರು.

RELATED ARTICLES  ಅಂಬೇಡ್ಕರ ನ್ಯಾಶನಲ್ ಫಿಲಾಸಫಿ ಅವಾರ್ಡಗೆ ಆಯ್ಕೆಯಾದ ಉದಯ ಬಶೆಟ್ಟಿ!