ಭಟ್ಕಳ: ತಾಲೂಕಾ ಸಾಹಿತ್ಯ ಪರಿಷತ್ ನಿಂದ ಉ.ಕ.ಜಿಲ್ಲಾ ೨೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಸಯ್ಯದ್ ಝಮೀರುಲ್ಲಾ ಷರೀಫ್ ಅವರನ್ನು ಅವರ ನಿವಾಸದಲ್ಲಿ ಶಾಲು ಹಾರ ಅರ್ಪಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಷರೀಫ್ ಮೂಲತಹ ತುಮಕೂರು ಜಿಲ್ಲೆಯ ಕೊರಟಗೆರೆಯವರಾದರೂ ಭಟ್ಕಳದಲ್ಲಿ ವೃತ್ತಿಜೀವನ ಆರಂಭಿಸಿ ಭಟ್ಕಳದಲ್ಲಿ ಸಾಹಿತ್ಯದ ಬೀಜವನ್ನು ಬಿತ್ತಿದವರು. ನಂತರದಲ್ಲಿ ಭಟ್ಕಳ ತಾಲೂಕಾ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರು. ಸಾಹಿತ್ಯದ ಮೂಲಕ ಸೌಹಾರ್ದ ತೆಯ ಸೇತುವೆಯನ್ನು ಕಟ್ಟಿದರು.

ಎಲ್ಲರನ್ನೂ ಸಾಹಿತ್ಯದೆಡೆಗೆ ಸೆಳೆವ ಕಾರ್ಯ ಮಾಡಿದವರು. ಸಾಹಿತ್ಯ ಕೃಷಿಯ ಮೂಲಕ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಮೌಲಿಕ ಕೃತಿಯನ್ನು ನೀಡಿದವರು. ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಈ ಬಾರಿಯ ಉ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿದೆ. ಆ ಮೂಲಕ ಭಟ್ಕಳದ ನೆಲಕ್ಕೆ ಮೊಟ್ಟಮೊದಲ ಸಾಹಿತ್ಯ ಸಮ್ಮೇಳನದ ಜಿಲ್ಲಾಧ್ಯಕ್ಷ ಸ್ಥಾನವನ್ನು ತಂದುಕೊಟ್ಟಿರುವುದು ನಮಗೆಲ್ಲ ಹೆಮ್ಮೆ. ಈ ನೆಲೆಯಲ್ಲಿ ಸಾಹಿತ್ಯ ಪರಿಷತ್ತಿನ ಪರವಾಗಿ, ಜಿಲ್ಲೆಯ ಎಲ್ಲ ಕನ್ನಡದ ಮನಸುಗಳ ಪರವಾಗಿ ಅಭಿನಂದಿಸುತ್ತಿದ್ದೇವೆ ಎಂದು ನುಡಿದರು.

RELATED ARTICLES  ಅವ್ಯವಸ್ಥೆಯ ಗೂಡಾದ ಬಸ್ ನಿಲ್ದಾಣ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಷರೀಫ್ ಅವರು ನಿಮ್ಮೆಲ್ಲರ ಪ್ರೀತಿ ಅಭಿಮಾನದಿಂದ ನನಗೆ ಸಾಹಿತ್ಯದಲ್ಲಿ‌ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾಗಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿರುವುದು ನಿಮ್ಮೆಲ್ಲರ ಪ್ರೀತಿಯಿಂದ. ಇಲ್ಲಿನ ಜನರ ಮನಸಲ್ಲಿ ಪ್ರೀತಿಯ ಸ್ಥಾನ ಕೊಟ್ಟಿರುವುದು ಎಲ್ಲಕ್ಕಿಂತ ದೊಡ್ಡದು ಎಂದರಲ್ಲದೇ ಗೌರವ ಸಲ್ಲಿಸಿ ಅಭಿನಂದಿಸಿದ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮ ದಲ್ಲಿ ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್, ಸಂಘಟನಾ ಕಾರ್ಯ ದರ್ಶಿ ಸಂತೋಷ ಆಚಾರ್ಯ, ಶಿಕ್ಷಕ ಸುರೇಶ ಮುರ್ಡೇಶ್ವರ, ನಾರಾಯಣ ನಾಯ್ಕ, ಅಶೋಕ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಕೃಷ್ಣ ಮೊಗೇರ್ ಅಳ್ವೆಕೋಡಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಸೈನಿಕರ ಕುಟುಂಬಕ್ಕೆ ಉಚಿತವಾಗಿ ಚಿಕಿತ್ಸೆ ನೀಡುವ ವೈದ್ಯ: ಶಿರಸಿಯಲ್ಲಿ ಯೋಧರಿಗೆ ಸಲ್ಲುತ್ತಿದೆ ವಿಶೇಷ ಗೌರವ