ಕಾರವಾರ: ಯಲ್ಲಾಪುರದಲ್ಲಿ ಡಿ.22 ಮತ್ತು 23 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಡಿ.22 (ಶನಿವಾರ) ರಂದು ಭಾಗವಹಿಸುವ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಿಗೆ, ಶಾಲೆ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ, ಕಚೇರಿ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಇಲಾಖೆಗಳ ಉಪನಿರ್ದೇಶಕರು ಒ.ಒ.ಡಿ ಸೌಲಭ್ಯ ಕಲ್ಪಿಸಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರ ಹಾಜರಾತಿ ಪತ್ರ ನೀಡಲಾಗುವುದು.
ಈ ಅವಕಾಶ ಬಳಸಿಕೊಂಡು ಶಿಕ್ಷಕ ಸಮುದಾಯ ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂದು ಅರವಿಂದ ಕರ್ಕಿಕೋಡಿ ಅವರು ಮನವಿ ಮಾಡಿದ್ದಾರೆ.