1993ರಲ್ಲಿ ಕುಮಟಾದ ರಾಷ್ಟ್ರೀಯ ವಿಚಾರಧಾರೆಯ ಸಮಾನ ಮನಸ್ಕ ಶಿಕ್ಷಣ ಪ್ರೇಮಿಗಳಿಂದ ಸ್ಥಾಪನೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಚಾರಧಾರೆಯನ್ನೊಳಗೊಂಡ ಸಂಸ್ಕಾರಯುತವಾದ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಸಮೀಕರಿಸಿಕೊಂಡು ವಿದ್ಯಾರ್ಥಿಗಳಲ್ಲಿ ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿರುತ್ತೇವೆ. ಸಂಸ್ಥೆಯು ಸಾಗಿ ಬಂದ 25 ವರ್ಷಗಳಲ್ಲಿ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ, ಕೊಲಾಬಾ ವಿಠೋಬಾ ಶಾನಭಾಗ ಕಲಬಾಗಕರ ಪ್ರೌಢಶಾಲೆ, ಎಸ್. ಎಮ್. ಶಾನಭಾಗ ಹೆಗಡೆಕರ ಶಿಕ್ಷಕರ ತರಬೇತಿ ಕೇಂದ್ರ, ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲಾಭಿವೃದ್ಧಿ ಸಂಸ್ಥೆ, ಬಿ. ಕೆ. ಭಂಡಾರಕರ್ಸ್ ಸರಸ್ವತಿ ಪ. ಪೂ. ಕಾಲೇಜು, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರಗಳನ್ನು ಸ್ಥಾಪಿಸಿ, ಸಹಸ್ರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಗಳಿಸಲು ಅನುವು ಮಾಡಿ ಕೊಟ್ಟಿರುತ್ತೇವೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ದಿಶೆಯಲ್ಲಿ ನಮ್ಮ ಸಂಸ್ಥೆಯು ಮುಕ್ತ ಮನಸ್ಸನ್ನು ಹೊಂದಿರುತ್ತದೆ.

ಸಂಸ್ಥೆಯು ಸಾಗಿಬಂದ ಪುಟ್ಟ 25 ಹೆಜ್ಜೆಗಳ ಸಿಂಹಾವಲೋಕನವನ್ನು ಮಾಡುವ ದಿಶೆಯಲ್ಲಿ ರಜತ ಸಂಭ್ರಮವನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಆಚರಿಸುತ್ತಿರುವ ನಾವು ಈಗಾಗಲೇ ದೀಪಾವಳಿ ಮೇಳದ ಪ್ರಯುಕ್ತ ‘ಹಳೆ ಬೇರು ಹೊಸ ಚಿಗುರು’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯಂದಿರನ್ನು ಸಂಸ್ಥೆಗೆ ಕರೆಯಿಸಿ ವಿಭಿನ್ನವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿರುತ್ತೇವೆ. ಅಲ್ಲದೇ, ನಮ್ಮ ಸಂಸ್ಥೆಯ ಹಿಂದಿನ ಅಧ್ಯಕ್ಷರಾದ ದಿ. ಬಿ. ಕೆ. ಭಂಡಾರಕರರವರ ಸ್ಮರಣೆಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಜ್ಞಾನಾಮೃತ’ ರಸಪ್ರಶ್ನೆ ಹಾಗೂ ‘ವಿದ್ಯಾರ್ಥಿ ಮಾರ್ಗದರ್ಶನ’ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಯಶಸ್ವಿಯಾಗಿ ಪೂರೈಸಿದ್ದೇವೆ. ಇನ್ಫೋಸಿಸ್ ಅವರ ಸಹಯೋಗದೊಂದಿಗೆ ನಿರ್ಮಾಣಗೊಂಡ ಬಿ. ಕೆ. ಭಂಡಾರಕರ್ಸ್ ಸರಸ್ವತಿ ಪ. ಪೂ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗುರುಗಳಾದÀ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಕರಕಮಲಗಳಿಂದ ಪಟ್ಟಶಿಷ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಮಾಡಿರುತ್ತೇವೆ. ಇದಲ್ಲದೇ, ನಿಕಟಪೂರ್ವ ಅಧ್ಯಕ್ಷರಾದ ದಿ. ಕಾಶೀನಾಥ ನಾಯಕರವರ ಸ್ಮರಣಾರ್ಥ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ‘ಕೊಂಕಣ ಭೂಷಣ’ ಪುರಸ್ಕಾರವನ್ನು ನೀಡುತ್ತಿದ್ದೇವೆ. ಈ ಪುರಸ್ಕಾರವು ₹2,500 ನಗದು, ಸನ್ಮಾನಪತ್ರಗಳನ್ನು ಒಳಗೊಂಡಿರುತ್ತದೆ. ರಜತಸಂಭ್ರಮದಸಾಂಸ್ಕøತಿಕ ಕಾರ್ಯಕ್ರಮಗಳುಶನಿವಾರ, ಡಿಸೆಂಬರ್ 22 ರಂದುಪ್ರಾರಂಭಗೊಂಡು ಮಂಗಳವಾರ, ಡಿಸೆಂಬರ್ 25ರವರೆಗೆ ಸತತ ನಾಲ್ಕು ದಿನಗಳ ಪರ್ಯಂತ ನೆರವೇರಲಿದ್ದು, ಕಾರ್ಯಕ್ರಮಗಳ ಮಾಹಿತಿ ಈ ಕೆಳಗಿನಂತಿರುತ್ತದೆ:

ದಿ. 22-12-2018 (ಶನಿವಾರ) ಬೆಳಿಗ್ಗೆ 10 ಗಂ.ಗೆ ಸಂಸ್ಥೆಯ ಮಹಾದ್ವಾರದ ಉದ್ಘಾಟನೆ, ಗಾಯತ್ರಿ ಜಪಯಜ್ಞ ಪರಮಪೂಜ್ಯ ಶ್ರೀ ಭವೇಶಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣಾಶ್ರಮ ಇವರ ದಿವ್ಯ ಉಪಸ್ಥಿತಿಯಲ್ಲಿ. ಸಾ. 4 ಗಂ.ಗೆ ವಸ್ತು ಪ್ರದರ್ಶನ, ಶೈಕ್ಷಣಿಕ ಹಾಗೂ ಆಹಾರ ಮಳಿಗೆಗಳ ಉದ್ಘಾಟನೆ. 4:30 ಕ್ಕೆ ಸಭಾ ಕಾರ್ಯಕ್ರಮ ಅಧ್ಯಕ್ಷತೆ ಶ್ರೀ ವಿಠ್ಠಲ ಆರ್. ನಾಯಕ, ಅಧ್ಯಕ್ಷರು, ಕೊಂಕಣ ಎಜ್ಯುಕೇಶನ್ ಟ್ರಸ್ಟ್. ಮುಖ್ಯ ಅತಿಥಿಗಳು ಶ್ರೀ ಶಿವಾನಂದ ಕಳವೆ, ಪರಿಸರ ತಜ್ಞರು, ಶಿರಸಿ, ಶ್ರೀ ದಿನೇಶ ನಾಯಕ, ಮ್ಯಾನೆಜಿಂಗ್ ಡೈರೆಕ್ಟರ್ ಡಿ.ಆರ್.ಎನ್ ಹಾಸ್ಪಿಟಾಲಿಟಿಸ್ ಪ್ರೈ.ಲಿ., ಹುಬ್ಬಳ್ಳಿ, ಶ್ರೀ ಈಶ್ವರÀ ನಾಯ್ಕ, ಉಪನಿರ್ದೇಶಕರು (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ, ಶ್ರೀ ಕೆ.ಟಿ.ಭಟ್ಟ ಡಿ.ಡಿ.ಪಿ.ಯು ಕಾರವಾರ.

RELATED ARTICLES  ನನ್ನ ಕೊನೇ ತನಕ ಸಂಗೀತ ಪಾಠ ಮಾಡುವೆ : ಎಂ.ಪಿ.ಹೆಗಡೆ‌ ಪಡಿಗೇರಿ

ಸಾಂಸ್ಕøತಿಕ ಕಾರ್ಯಕ್ರಮಗಳು: ಕ್ರೀಡಾ ಸಂಭ್ರಮ – ಆಕರ್ಷಕ ಡೆಂಬಲ್ಸ್ ಹಾಗೂ ಹೂಪ್ಸ್ ನೃತ್ಯಗಳು ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ. ಸಂಗೀತ ಸಂಭ್ರಮ: ವಿದ್ವಾನ ಶಂಕರ ಶಾನಭಾಗ ಬೆಂಗಳೂರು ಮತ್ತು ಸಂಗಡಿಗರಿಂದ. ನೃತ್ಯ ಸಂಭ್ರಮ: ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ.
ದಿ. 23-12-2018 (ರವಿವಾರ) ಸಮಯ ಸಾ. 4:30 ರಿಂದ : ಉದ್ಘಾಟಕರು ಶ್ರೀ ಟಿ.ಜಿ. ಕೃಷ್ಣ ಭಟ್ಟ ನಿವೃತ್ತ ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್, ಬೆಂಗಳೂರು, ಅಧ್ಯಕ್ಷತೆ ಶ್ರೀ ವಿಠ್ಠಲ ಆರ್ ನಾಯಕ ಅಧ್ಯಕ್ಷರು, ಕೊಂಕಣ ಎಜ್ಯುಕೇಶÀನ್ ಟ್ರಸ್ಟ್ ಕುಮಟಾ, ಮುಖ್ಯ ಅತಿಥಿಗಳು ಶ್ರೀ ಎನ್. ಜಿ. ನಾಯಕ ಡಿ.ಡಿ.ಪಿ.ಆಯ್ ಕಾರವಾರ, ಶ್ರೀ ದಿನಕರ ಕೆ. ಶೆಟ್ಟಿ ಶಾಸಕರು, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ.

‘ಕ್ರೀಡಾ ಸಂಭ್ರಮ’ – ಲೇಜಿಮ್ ಹಾಗೂ ಪಿರಮಿಡ್ ಶೋ, ಸಿ.ವಿ.ಎಸ್.ಕೆ ವಿದ್ಯಾರ್ಥಿಗಳಿಂದ, ‘ಸಾಂಸ್ಕøತಿಕ ಸಂಭ್ರಮ’ –‘ದಶಾವತಾರ’ ನೃತ್ಯರೂಪಕ ಆರ್.ಡಿ.ಎಸ್.ಎಚ್ ಬಾಲಮಂದಿರ ವಿದ್ಯಾರ್ಥಿಗಳಿಂದ, ‘ಭಸ್ಮಾಸುರ ಮೋಹಿನಿ’ ಯಕ್ಷರೂಪಕ ಹಾಗೂ ನೃತ್ಯ ಕಾರ್ಯಕ್ರಮ, ಬಿ.ಕೆ.ಭಂಡಾರಕರ್ಸ್ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳಿಂದ.
ವಿಶೇಷ ಆಕರ್ಷಣೆ: ‘ಕರ್ನಾಟಕ ದರ್ಶನ’, ‘ಕನ್ನಡ ರತ್ನ’ ಶ್ರೀ ನಾರಾಯಣ ಶಾಸ್ತ್ರೀ ಗುಣವಂತೆ (ಜಮಖಂಡಿ)ಯವರ ವಾಗ್ಝರಿ, ವಿದ್ವಾನ ಶಿವಾನಂದ ಭಟ್ಟ ಹಡಿನಬಾಳ ಇವರ ನಾದಸಿರಿ, ಸತೀಶ ಯಲ್ಲಾಪುರ ಇವರ ಕುಂಚಗರಿ.

ದಿ. 24-12-2018 (ಸೋಮವಾರ) ಬೆ. 10:30 ರಿಂದ 1:30ರ ವರೆಗೆ ‘ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದ ಅನಿವಾರ್ಯತೆ’ ವಿಷಯದಡಿ ಸಂವಾದ ಕಾರ್ಯಕ್ರಮ. ಉದ್ಘಾಟಕರು ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ; ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿಗಳು.
ಕ್ರೀಡಾ ಸಂಭ್ರಮ: ಸಂ. 4 ಗಂ.ಗೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಯಾದ ‘ಸಪ್‍ಟ್ಟೆಕ್ರಾ (ಕಿಕ್ ವ್ಹಾಲಿಬಾಲ್)’ ಕ್ರೀಡೆಯನ್ನು ಉತ್ತರಕನ್ನಡಕ್ಕೆ ಪರಿಚಯಿಸುವುದು. ಶ್ರೀ ರಮೇಶ ನಾಯ್ಕ ದಾವಣಗೆರೆ ಮತ್ತು ತಂಡದವರಿಂದ. ಸಂ. 4:30ಕ್ಕೆ ಸಭಾ ಕಾರ್ಯಕ್ರಮ ಮತ್ತು ‘ಕೊಂಕಣ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟಕರು ಡಾ.ಎಚ್.ಎಸ್.ವೆಂಕಟೇಶಮೂರ್ತಿ ಖ್ಯಾತ ಸಾಹಿತಿಗಳು ಬೆಂಗಳೂರು, ಅಧ್ಯಕ್ಷತೆ ಶ್ರೀ ಶಿವಾನಂದ ಹೆಗಡೆ ಕೆರೆಮನೆ ನಿರ್ಧೇಶಕರು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ, ಮುಖ್ಯ ಅತಿಥಿಗಳು ಶ್ರೀ ಸಿ.ಎಸ್.ನಾಯ್ಕ ಡಿ.ಡಿ.ಪಿ.ಆಯ್ ಶಿರಸಿ, ಡಾ.ಆರ್.ಜಿ.ಹೆಗಡೆ ಶಿಕ್ಷಣ ತಜ್ಞರು ಹಾಗೂ ಅಂಕಣಕಾರರು.
ಸಾಂಸ್ಕøತಿಕ ಕಾರ್ಯಕ್ರಮ: ‘ಕುರುಕ್ಷೇತ್ರದ ಆ 18 ದಿನಗಳು’ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ, ‘ನೃತ್ಯ ವೈಭವ’ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳಿಂದ, ‘ನೃತ್ಯಮಾಲಾ’-ಬೆಂಗಳೂರು ತಂಡದಿಂದ ಓಡಿಸ್ಸಿ, ಕಥಕ್ ಹಾಗೂ ಭರತನಾಟ್ಯ ಕಾರ್ಯಕ್ರಮ, ‘ಪರಿವರ್ತನೆ ಜಗದ ನಿಯಮ’ ಯಕ್ಷ ನೃತ್ಯರೂಪಕಕುಮಾರಿ ತುಳಸಿ ಹೆಗಡೆ ಶಿರಸಿ ಹಾಗೂ ತಂಡದವರಿಂದ.

RELATED ARTICLES  ಮಡಿವಾಳ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಮನವಿ

ದಿ. 25-12-2018 (ಮಂಗಳವಾರ) ಬೆ. 10:30ಕ್ಕೆ ‘ಉತ್ತರಕನ್ನಡ ಶಿಕ್ಷಣ ಕ್ಷೇತ್ರಕ್ಕೆ ಹೊಸ ದೃಷ್ಟಿಕೋನ, ಹೊಸ ಆಯಾಮ’ ವಿಷಯ ಕುರಿತಾಗಿ ಉತ್ತರಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ಪದಾಧಿಕಾರಿಗಳ ಚಿಂತನಾ ಸಭೆ. ಮಧ್ಯಾಹ್ನ 11:30ಕ್ಕೆ ಮಾಜಿ ಪ್ರಧಾನಿ ದಿ.ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಂಯೋಜಿತವಾದ ‘ಅಟಲ್ ಟಿಂಕರಿಂಗ್ ಲ್ಯಾಬ್’ನ ಉದ್ಘಾಟನೆ. ಉದ್ಘಾಟಕರು ಡಾ. ವಿಜಯ ಕುಮಾರ ಸಾರಸ್ವತ ಪ್ರಖ್ಯಾತ ವಿಜ್ಞಾನಿಗಳು ಮತ್ತು ನೀತಿ ಆಯೋಗದ ಗೌರವಾನ್ವಿತ ಸದಸ್ಯರು, ಭಾರತ ಸರ್ಕಾರ. ಸಂಜೆ 4:30ರಿಂದ ಸಮಾರೋಪ ಸಮಾರಂಭ ಹಾಗೂ ‘ಕೊಂಕಣ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟಕರು ಶ್ರೀ ಬಸ್ತಿ ವಾಮನ ಶೆಣೈ ಅಧ್ಯಕ್ಷರು ವಿಶ್ವ ಕೊಂಕಣಿ ಕೇಂದ್ರ ಮಂಗಳೂರು, ಅಧ್ಯಕ್ಷರು ಶ್ರೀ ವಿಠ್ಠಲ ಆರ್. ನಾಯಕ ಅಧ್ಯಕ್ಷರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ, ಅತಿಥಿಗಳಾಗಿ ಡಾ. ಮೋಹನ ಪೈ ಅಧ್ಯಕ್ಷರು ಕರ್ನಾಟಕ ಕೊಂಕಣಿ ಭಾಷಾ ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಸಮೂಹ, ಡಾ. ಅರುಣ ಇಸಳೂರು ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕøತರು ಎನ್.ಟಿ.ಟಿ.ಕೆ ಸುರತ್ಕಲ್, ಡಾ.ಆರ್.ಆರ್.ಸೋಂದೆ ಖ್ಯಾತ ವಿಜ್ಞಾನಿಗಳು ಮತ್ತು ಉಪಾಧ್ಯಕ್ಷರು ಥರ್ಮೆಕ್ಸ್ ಪುಣೆ, ಶ್ರೀ ಪ್ರದೀಪ ಪೈ ಮ್ಯಾನೆಜಿಂಗ್ ಡೈರೆಕ್ಟರ್ ಹಾಂಗ್ಯೋ ಮಿಲ್ಕ್ಸ್ ಪ್ರೈ.ಲಿ. ಕ್ರೀಡಾ ಸಂಭ್ರಮದಲ್ಲಿ ‘ಮಲ್ಲಕಂಬ ಪ್ರದರ್ಶನ’ ಶ್ರೀ ತುಳಸಿಗಿರಿ ಮತ್ತು ವಿದ್ಯಾರ್ಥಿಗಳು ಬಾಗಲಕೋಟ ಇವರಿಂದ, ‘ನೃತ್ಯ ಸಂಭ್ರಮ’ ಮಾತೃಮಂಡಳಿ ಮತ್ತು ಪೂರ್ವ ವಿದ್ಯಾರ್ಥಿಗಳಿಂದ, ವಿಶೇಷ ಆಕರ್ಷಣೆ ‘ಜಾದೂ ಪ್ರದರ್ಶನ’ ಕುದ್ರೋಳಿ ಗಣೇಶ ಹಾಗೂ ತಂಡದವರಿಂದ.
ಈ ಎಲ್ಲಾ ಕಾರ್ಯಕ್ರಮಗಳು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ. ಶ್ರೀ ಸೀತಾರಾಮ ನಾಯಕರವರ ಸ್ಮರಣಾರ್ಥ ಸಿದ್ಧಪಡಿಸಿರುವ ವಿಶಾಲ ವೇದಿಕೆಯಲ್ಲಿ ಜರುಗಲಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ವಿಶ್ವಸ್ಥರ ಸ್ಮರಣೆಯಲ್ಲಿ ಏಳು ದ್ವಾರಗಳನ್ನು ಸಭಾಂಗಣದಲ್ಲಿ ನಿರ್ಮಿಸಲಾಗುವದು.ವಿಶೇಷ ಪುಸ್ತಕ ಮಳಿಗೆಗಳು, ಶೈಕ್ಷಣಿಕ ಸಂಪನ್ಮೂಲಗಳ ವ್ಯಾಪಾರಿ ಮಳಿಗೆಗಳು ಮತ್ತು ಸಿರಿಧಾನ್ಯ ಖಾದ್ಯ ಮಳಿಗೆಗಳು, ದೇಸೀ ವಸ್ತುಗಳ ವ್ಯಾಪಾರಿ ಮಳಿಗೆಗಳು, ಆಲೆಮನೆ ಇವುಗಳ ವ್ಯವಸ್ಥೆಯನ್ನು ಮಾಡಲಾಗಿz