ಯಲ್ಲಾಪುರ: ಅಮೇಜಾನ್ ನಂತಹ ಆನ್ಲೈನ್ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ವಾಸ್ತು ಪ್ಲಾಂಟ್ ಇನ್ನು ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಲಭ್ಯ, ನುರಾರು ಹೂಗಿಡದ ಮಾರುಕಟ್ಟೆಯಾದ ವನದುರ್ಗಾ ನರ್ಸರಿಯಲ್ಲಿ ಲಭ್ಯವಿವೆ.

ಗುಳ್ಳಾಪುರದ ವನದುರ್ಗಾ ನರ್ಸರಿಯಲ್ಲಿ ನೂರಾರು ಬಗೆಯ ಹೂವಿನ ಗಿಡಗಳು ಬಂದಿದ್ದು, ಈ ಹೂ ಗಿಡಗಳ ಬಗ್ಗೆ ಕುತೂಹಲ ಹೊಂದಿರುವ ಮಹಿಳೆಯರ ದಂಡೇ ನರ್ಸರಿಗೆ ಆಗಮಿಸಿ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದೆ. ದೂರದ ಮಹಾರಾಷ್ಟ್ರ ರಾಜ್ಯದಿಂದ ತರಿಸಿದ ವಿವಿಧ ಬಗೆಯ, ಹತ್ತರಿಂದ ಹದಿನೈದು ಬಣ್ಣದ, ದೊಡ್ಡ, ಸಣ್ಣ ಗಾತ್ರದ ಹೂವಿನ ಗಿಡಗಳು ಕೆವಲ ಮಹಿಳೆಯರನ್ನೆ ಅಲ್ಲದೇ ಎಲ್ಲರ ಮನವನ್ನು ಸೆಳೆಯುತ್ತಿವೆ.
ಅಷ್ಟೇ ಅಲ್ಲ, ಇದುವರೆಗೆ ಅಮೆಜಾನ್ ನಂತಹ ಸೈಟುಗಳಿಂದ ತರಿಸಬೇಕಾಗುತ್ತಿದ್ದ ಲಕ್ಕಿ ಬಾಂಬು ವಾಸ್ತು ಪ್ಲಾಂಟ್ ಕೂಡ ವನದುರ್ಗಾ ನರ್ಸರಿಯಲ್ಲಿ ಲಭ್ಯವಿದೆ.
ಗುಲಾಬಿ, ಸೇವಂತಿಗೆ, ಜರ್ಬೆರಾ, ದಾಸವಾಳ, ಮಲ್ಲಿಗೆ, ಹಬ್ಬಲಿಗೆ, ಡೇರೆ, ಅಶೋಕಾ, ಗೊಂಡೆ ಮುಂತಾದ ಹೂವಿನ ಗಿಡಗಳು ಇದೇ ಮೊದಲ ಬಾರಿಗೆ ವಮದುರ್ಗಾ ನರ್ಸರಿಗೆ ತರಿಸಿಕೊಳ್ಳಲಾಗಿದೆ.
ಇವೆಲ್ಲವುಗಳು ಉತ್ತಮ ಗುಣಮಟ್ಟದವಾಗಿದ್ದು, ಒಳ್ಳೆಯ ದರದಲ್ಲಿ ಗ್ರಾಹಕರಿಗೆ ಮಾರಾಟವಾಗುತ್ತಿದೆ.
ಕೃಷಿಕರಿಗೆ ಸಹ ಅತ್ಯಂತ ಉಪಯುಕ್ತವಾಗ ಕಸಿ ಕಾಳು ಮೆಣಸು, ಮಾವು, ಬೇವು, ಸಂಪಿಗೆ, ಹಲಸು, ಬಕ್ಕೆ, ಹಾಗೂ ಎಲ್ಲಾ ತೋಟಗಾರಿಕಾ ಗಿಡಗಳೊಂದಿಗೆ ಟಿಶ್ಯುಕಲ್ಚರ್ ಬಾಳೆ ಗಿಡವನ್ನು ಸಹ ತರಿಸಿಕೊಡಲಾಗುವುದು ಎಂದು ನರ್ಸರಿಯ ಸಂಧ್ಯಾ ಭಟ್ಟ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು ಕೊರೋನಾ ಅಬ್ಬರ : ಮೂವರನ್ನು ಬಲಿಪಡೆದ ಕೋವಿಡ್ 19