ಮೇಷ:- ಸಮಾಜದ ಎಲ್ಲಾ ವ್ಯಕ್ತಿಗಳನ್ನು ಸಂಘಟಿಸುವ ನಿಮ್ಮ ಸಾಮರ್ಥ್ಯ ಪ್ರಶಂಸೆಗೆ ಪಾತ್ರವಾಗುತ್ತದೆ. ಇದು ನಿಮ್ಮ ಮುಂದಿನ ರಾಜಕೀಯ ಜೀವನಕ್ಕೆ ಮಹತ್ತರ ಬದಲಾವಣೆಯನ್ನು ತಂದುಕೊಡುತ್ತದೆ. ಹಾಗಾಗಿ ಎಲ್ಲರೊಡನೆ ಸಮಾಲೋಚಿಸಿ ನಿರ್ಧಾರ ತಳೆಯಿರಿ.

ವೃಷಭ:- ನಿಮ್ಮ ಮನದಲ್ಲಿನ ದುಗುಡಗಳು ಕಡಿಮೆ ಆಗಿ ಮನಸ್ಸು ಕೊಳದ ನೀರಿನಂತೆ ಪ್ರಶಾಂತವಾಗುವುದು. ಇದರಿಂದ ನಿಮ್ಮ ಮನದಲ್ಲಿ ಉತ್ತಮ ವಿಚಾರಗಳು ಹೊರಹೊಮ್ಮುವವು ಮತ್ತು ನೀವು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವಿರಿ.

ಮಿಥುನ:- ನಿಮ್ಮ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವವು. ಆತುರಗಾರನಿಗೆ ಬುದ್ಧಿ ಕಡಿಮೆ ಎಂಬ ಗಾದೆ ಮಾತು ನಿಮಗೆ ಅನ್ವಯಿಸುವುದು. ಹಾಗಾಗಿ ಸಾವಧಾನವಾಗಿ ತೀರ್ಮಾನ ಕೈಗೊಳ್ಳಿ.

ಕಟಕ:- ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಉಂಟಾದರೂ ಅಂತಿಮವಾಗಿ ನಿಮಗೆ ಗೆಲುವು ನಿಶ್ಚಿತವಾಗಿರುತ್ತದೆ. ಮಾತೆ ದುರ್ಗಾದೇವಿಯನ್ನು ಸ್ಮರಿಸುವುದು ಒಳ್ಳೆಯದು.

RELATED ARTICLES  ವರ್ಷದ ಕೊನೆಯಲ್ಲಿ ವಾಹನ ಸವಾರರಿಗೆ ಗುಡ್ ನ್ಯೂಸ್ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ.

ಸಿಂಹ:- ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಜಾಣತನದಿಂದ ಯೋಚಿಸಬಹುದಾಗಿದೆ. ಮಗನು ತನ್ನ ಕಾರ್ಯದಲ್ಲಿ ತಲ್ಲೀನನಾಗಿದ್ದು ನಿಮ್ಮ ಹೆಚ್ಚಿನ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿರುವುದು ನಿಮಗೆ ಹೆಮ್ಮೆ ಎನಿಸುವುದು.

ಕನ್ಯಾ:- ಜೀವವಿಮಾ ವಿಭಾಗದಲ್ಲಿ ಹೆಚ್ಚಿನ ಒಲವು ಯಶಸ್ಸು ದೊರೆಯಲಿದೆ. ಬಹುದಿನದ ಕನಸು ನಿಮ್ಮದಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಭ್ರಮ ಪಡುವುದು ಬೇಡ. ಕಾರ್ಯ ಪೂರ್ಣವಾದ ಮೇಲೆ ಸಂಭ್ರಮಿಸುವುದು ಇದ್ದೇ ಇರುತ್ತದೆ.

ತುಲಾ:- ಮಾಡುವ ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡಿದರೆ ಯಾರಿಂದಲೂ ಟೀಕೆಗೆ ಆಸ್ಪದವಿರುವುದಿಲ್ಲ. ಆದರೆ ನಿಮ್ಮಲ್ಲಿರುವ ಜಡತ್ವವನ್ನು ತೊಡೆದು ಹಾಕಿ ಕಾರ್ಯ ಪ್ರವೃತ್ತರಾದರೆ ಹೆಚ್ಚಿನ ಲಾಭ ಹೊಂದುವಿರಿ.

ವೃಶ್ಚಿಕ:- ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಪ್ರಸಂಗಗಳೇ ಹೆಚ್ಚಾಗುತ್ತಿರುವುದರಿಂದ ಮಾನಸಿಕ ಖಿನ್ನತೆ ಎದುರಾಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಮತ್ತು ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ.

RELATED ARTICLES  ಪ್ರತಿಭಟನೆಯ ನಂತರವೂ, ವೈದ್ಯಕೀಯ ತಿದ್ದುಪಡಿ ಮಸೂದೆ ತರಲು ಸರ್ಕಾರ ನಿರ್ಧಾರ.

ಧನುಸ್ಸು:- ಮಿತ್ರರಾಗಲೀ ನಿಮ್ಮ ಮೇಲಧಿಕಾರಿಗಳಾಗಲಿ ನಿಮ್ಮ ಕಾರ್ಯ ತತ್ಪರತೆಯನ್ನು ಕಂಡು ತಮ್ಮ ಹರ್ಷವನ್ನು ವ್ಯಕ್ತಪಡಿಸುವರು. ವೃತ್ತಿ ಜೀವನದಲ್ಲಿ ಇದು ನಿಮಗೆ ಹೊಸ ದಾರಿಯನ್ನು ತೋರಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮಕರ:- ಕಬ್ಬಿಣ, ಪ್ಲಾಸ್ಟಿಕ್‌ ಮತ್ತು ಸಿಮೆಂಟ್‌ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡು ಬರುವುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುತ್ತದೆ. ಕೆಲವರಿಗೆ ತಾವಿರುವ ಮನೆಯನ್ನು ಬದಲಾಯಿಸುವ ಚಿಂತೆ ಕಾಡುತ್ತದೆ.

ಕುಂಭ:- ಅಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ದಾರಿ ಮಾಡಿಕೊಡುವುದು. ಇದರಿಂದ ನೀವು ಆಂತರಿಕವಾಗಿ ಪರಿಶುದ್ಧಗೊಳ್ಳುವಿರಿ. ನಿಮ್ಮ ಆತ್ಮಶಕ್ತಿಯು ಜಾಗೃತವಾಗುವುದು.

ಮೀನ:- ನಿಮ್ಮದೆ ಆದ ಅನುಭವಗಳ ಮೂಸೆಯಲ್ಲಿ ಪ್ರಸಿದ್ಧ ವಿಚಾರಗಳು ನಿಮಗೆ ಅನುಕೂಲಕರ ವಾತಾವರಣವನ್ನುಂಟು ಮಾಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವರು.