ಹೊನ್ನಾವರ: ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವು ನೇರವೆರಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಂ.ಪಿ.ಕರ್ಕಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಗರದ ಖ್ಯಾತ ರಂಗ ಚಿಂತಕರಾದ ಶ್ರೀ ದೇವೇಂದ್ರ ಬೆಳೆಯೂರು, ಇವರು ಪ್ರೀತಿ ಕರುಣೆಯಿಂದ ಬದುಕುವುದೇ ಧರ್ಮ, ಸಂಸ್ಕಾರವಂತರಾಗಿ, ಪ್ರಕೃತಿದತ್ತವಾದ ಎಲ್ಲಾ ಚೈತನ್ಯವನ್ನು ಒಗ್ಗೂಡಿಸಿಕೊಂಡು ನಮ್ಮೆಲ್ಲರಿಗೆ ಆದರ್ಶನಾದ ಶ್ರೀರಾಮನಂತೆ ಸುಪ್ರಜೆಯಾಗಿ ಬದುಕಿರಿ ಎಂದು ಕರೆ ನೀಡಿದರು. ನಮ್ಮ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ. ಕೃಷ್ಣಮೂರ್ತಿ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನಮ್ಮ ಸಂಸ್ಥೆ ನಿಮ್ಮೊಂದಿಗೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮೀ ಎಂ. ನಾಯ್ಕ ಇವರು ವಿದ್ಯಾರ್ಥಿಗಳು ಮೂಲ ವಿಜ್ಞಾನದ ಅಧ್ಯಯನದೊಂದಿಗೆ ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು.

RELATED ARTICLES  ನಾವು ನಮ್ಮಿಷ್ಟ ಫೇಸಬುಕ್ ಗ್ರೂಪ್ ನ ಐದನೇ ವಾರ್ಷಿಕ ಸ್ನೇಹ ಸಮ್ಮೇಳನ : ಸಂಯೋಜನೆಗೊಂಡಿದೆ "ಸ್ನೇಹ ದೀಪ"

ಸಭಾಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಶ್ರೀ. ಎಂ.ಎಚ್. ಭಟ್ಟ ರವರು ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅತ್ಯಗತ್ಯ, ಅದನ್ನು ಗುರುತಿಸುವ ಕೆಲಸ ನಮ್ಮ ಮಹಾವಿದ್ಯಾಲಯ ಮಾಡುತ್ತಿದೆ ಅಂತೆಯೇ ಎಲ್ಲ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲೂ ಸಾಧಕರಾಗಬೇಕೆಂದು ಹೇಳಿದರು. ಈ ವೇದಿಕೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಕು. ಅಖಿಲಾ ನಾಗರಾಜ ಹೆಗಡೆ ಹಾಗೂ ಕು. ಆದರ್ಶ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀ. ಎಸ್. ಎಂ. ಭಟ್ಟ, ಖಜಾಂಚಿಯಾದ ಶ್ರೀ. ಉಮೇಶ ನಾಯ್ಕ, ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಶ್ರೀ. ಆಯ್.ಎ.ಶೇಖ್, ಪ್ರಧಾನ ಕಾರ್ಯದರ್ಶಿಯಾದ ಕು. ಮಂಜುನಾಥ ಸಾಲೇಹಿತ್ತಲ್, ಕ್ರೀಡಾ ಕಾರ್ಯದರ್ಶಿಯಾದ ಪ್ರಜ್ವಲ ಮೊಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಟಿ.ಎಸ್.ಎಸ್.ನ ವ್ಯಾಪಾರಿ ಅಂಗಳದಲ್ಲಿ ಚಕ್ಲಿ ಕಂಬಳ.

ಉಪನ್ಯಾಸಕರಾದ ಶ್ರೀ. ಆಯ್.ಎ.ಶೇಖ್ ಸ್ವಾಗತಿಸಿದರು, ಶ್ರೀ. ವಿನಾಯಕ ಭಟ್ಟ ಇವರು ಪ್ರಾಸ್ತಾವಿಕ ನುಡಿಯೊಂದಿಗೆ ಪರಿಚಯಿಸಿದರು, ಶ್ರೀ ವಿದ್ಯಾಧರ ನಾಯ್ಕ ಇವರು ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀ. ಪ್ರಸಾದ ಎಸ್.ಜಿ. ಇವರು ವಂದನಾರ್ಪಣೆಯನ್ನು ಸಲ್ಲಿಸಿದರು.