ರಾಯಚೂರು: ನಿನ್ನೆ ಅಧಿಕಾರಿ ಮೇಲೆ ಲಾರಿ ಹತ್ತಿಸಿ ಕೊಲೆಗೈದಿದ್ದ ಲಾರಿ ಚಾಲಕನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಾಹೇಬ್ ಪಾಟೀಲ್ಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲು ಅವರು ಹೋಗಿದ್ದರು. ಈ ವೇಳೆ ಲಾರಿ ಚಾಲಕ ಅವರಿಂದ ತಪ್ಪಿಸಿಕೊಳ್ಳಲು ಅವರಿಗೆ ಲಾರಿ ಡಿಕ್ಕಿ ಹೊಡೆಸಿದ್ದಾನೆ. ಕೆಳಗೆ ಬಿದ್ದ ಸಾಹೇಬ್ ಪಾಟೀಲ್ ಅವರ ಎರಡೂ ಕಾಲುಗಳ ಮೇಲೆ ಲಾರಿ ಹತ್ತಿ, ಕಾಲುಗಳು ಕಟ್ ಆಗಿವೆ ಎಂದು ತಿಳಿದುಬಂದಿದೆ.
ಗಾಯಗೊಂಡ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಸಾಹೇಬ್ ಪಾಟೀಲ್ ಮೃತಪಟ್ಟ ಗ್ರಾಮ ಲೆಕ್ಕಾಧಿಕಾರಿ . ಮಾನ್ವಿ ತಾಲೂಕಿನ ಚೀಕಪರ್ವಿ ಗ್ರಾಮದ ಸಾಹೇಬ್ ಪಾಟೀಲ್ ಚೀಕಪರ್ವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣವು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು ಇಂದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಲಾರಿ ಚಾಲಕ ರಂಗಪ್ಪ ಎಂದು ತಿಳಿದುಬಂದಿದೆ.