ಮೇಷ ರಾಶಿ
ಮಾದಕವಸ್ತುವಿನ ಅವಲಂಬನೆ ಹೆಚ್ಚುವ ಸಾಧ್ಯತೆಗಳಿರುವುದರಿಂದ ಸ್ವಯಂ ಔಷಧೋಪಚಾರ ಮಾಡಬೇಡಿ. ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ. ನಿಮ್ಮ ಮಕ್ಕಳಿಗಾಗಿ ಯೋಜನೆಗಳು ಮಾಡಲು ಅತ್ಯುತ್ತಮ ದಿನ. ನಿಮ್ಮನ್ನು ತನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ಸಂಧಿಸುತ್ತೀರಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆ
ವೃಷಭ ರಾಶಿ
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನೀವು ಅತೀ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ಪ್ರಣಯದ ಬಂಧಗಳು ನಿಮ್ಮ ಸಂತೋಷವನ್ನು ಆಸಕ್ತಿಕರವಾಗಿಸುತ್ತವೆ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ – ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತೀರಿ.
ಮಿಥುನ ರಾಶಿ
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ಹೆತ್ತವರ ಆರೋಗ್ಯ ಚಿಂತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ನೀವು ಮೂಡ್ ಆಫ್ ಆಗಿರುವುದರಿಂದ ನಿಮ್ಮ ಸಂಗಾತಿಯ ಮೆಲೆ ಸಿಟ್ಟಾಗಬಹುದು.
ಕರ್ಕ ರಾಶಿ
ಹಿರಿಯರು ಉತ್ತಮ ಲಾಭ ಪಡೆಯಲು ತಮ್ಮ ಹೆಚ್ಚುವರಿ ಶಕ್ತಿಯನ್ನು ಸಕಾರಾತ್ಮಕ ಬಳಕೆಗೆ ವಿನಿಯೋಗಿಸಬೇಕು. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ನಿಮ್ಮ ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ಕಳೆದ ಸಂತೋಷದ ನೆನಪುಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ. ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ.
ಸಿಂಹ ರಾಶಿ
ನಿಮ್ಮನ್ನು ನೀವೇ ಅನಗತ್ಯವಾಗಿ ದೂಷಿಸುವುದು ನಿಮ್ಮ ಚೈತನ್ಯವನ್ನು ಕುಗ್ಗಿಸಬಹುದು. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನಿಮ್ಮ ಜೊತೆಗಿರುವ ನಿಮ್ಮೊಂದಿಗೆ ಬಹಳ ಸಂತೋಷದಿಂದಿರುವುದಿಲ್ಲ – ನೀವು ಅವರನ್ನು ಸಂತೋಷಗೊಳಿಸಲು ಏನೇ ಮಾಡಿದರೂ ಕೂಡ. ಪ್ರಣಕ್ಕೆ ಧಕ್ಕೆಯಾಗುತ್ತದೆ ಮತ್ತು ನಿಮ್ಮ ಅಮೂಲ್ಯ ಉಡುಗೊರೆಗಳು / ಬಹುಮಾನಗಳೂ ಯಾವ ಇಂದ್ರಜಾಲವನ್ನೂ ಮಾಡುವುದಿಲ್ಲ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ನಿಮ್ಮ ಕೆಲವು ಕೆಲಸಗಳಿಗೆ ನಿಮ್ಮ ಸಂಗಾತಿಯ ಹಾಳಾದ ಆರೋಗ್ಯದಿಂದಾಗಿ ಇಂದು ಅಡ್ಡಿಯಾಗಬಹುದು.
ಕನ್ಯಾ ರಾಶಿ
ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ – ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಆರಾಮ- ಆನಂದ ಮತ್ತು ಭಾವಪರವಶತೆಯನ್ನು ನೀವು ಕಾಣುವುದರಿಂದ ನಿಮ್ಮ ಕೆಲಸ ಹಿಂದೆ ಬೀಳುತ್ತದೆ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ – ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ.
ತುಲಾ ರಾಶಿ
ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ಮನೆಯ ಸೌಂದರ್ಯದ ಜೊತೆಗೆ ಮಕ್ಕಳ ಅಗತ್ಯಗಳನ್ನೂ ನೋಡಿಕೊಳ್ಳಿ. ಮಕ್ಕಳಿಲ್ಲದ ಮನೆಗಳು ಕ್ರಮಬದ್ಧವಾಗಿದ್ದರೂ ಕೂಡ ಆತ್ಮವಿಲ್ಲದಂತಿರುತ್ತವೆ. ಮಕ್ಕಳು ಮನೆಗಳಿಗೆ ಒಂದು ಆನಂದ ಮತ್ತು ಸಂತೋಷ ತರುತ್ತಾರೆ. ಅನಿರೀಕ್ಷಿತ ಪ್ರಣಯ ಭಾವ ಸಂಜೆಯ ಹೊತ್ತಿಗೆ ನಿಮ್ಮ ಮನಸ್ಸನ್ನು ಆವರಿಸುತ್ತದೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.
ವೃಶ್ಚಿಕ ರಾಶಿ
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಇಂದು ಪ್ರೀತಿಯ ಅನುಪಸ್ಥಿತಿಯ ಭಾವನೆ ಬರಬಹುದು. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ. ನೀವು ಒಂದು ಸುಂದರವಾದ ಪ್ರಣಯಭರ್ತ ದಿನವನ್ನು ಹೊಂದುತ್ತೀರಾದರೂ, ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು.
ಧನು ರಾಶಿ
ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗಿನ ಸಂತಸದ ಪ್ರಯಾಣ ನಿಮಗೆ ಸಮಾಧಾನ ನೀಡುತ್ತದೆ. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ನಿಮ್ಮ ಉಪಸ್ಥಿತಿ ನಿಮ್ಮ ಪ್ರೀತಿಪಾತ್ರರಿಗೆ ಈ ವಿಶ್ವವನ್ನು ಒಂದು ಯೋಗ್ಯ ಸ್ಥಾನವನ್ನಾಗಿ ಮಾಡುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮಹಿಳೆಯರು ಶುಕ್ರನಿಂದ ಮತ್ತು ಪುರುಷರು ಮಂಗಳನಿಂದ, ಆದರೆ ಇದು ಶುಕ್ರ ಹಾಗು ಮಂಗಳಗಳು ಒಬ್ಬರಲ್ಲೊಬ್ಬರು ಲೀನವಾಗುವ ದಿನ.
ಮಕರ ರಾಶಿ
ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಸಂಪರ್ಕಗಳು ಮತ್ತು ಚರ್ಚೆಗಳು ಚೆನ್ನಾಗಿ ನಡೆಯದಿದ್ದಲ್ಲಿ – ನೀವು ನಿಮ್ಮ ಶಾಂತತೆ ಕಳೆದುಕೊಳ್ಳಬಹುದು ಮತ್ತು ಏನಾದರೂ ಹೇಳಬಹುದು – ನಂತರ ನೀವು ಇವುಗಳ ಬಗ್ಗೆ ವಿಷಾದಿಸುತ್ತೀರಿ –ಮಾತನಾಡುವ ಮೊದಲು ಯೋಚಿಸಿ. ಧೃತಿಗೆಡಬೇಡಿ – ವೈಫಲ್ಯಗಳು ಸಹಜ ಅವುಗಳು ಜೀವನದ ಸೌಂದರ್ಯವಾಗಿವೆ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಇಂದು ನಿಮ್ಮ ಮದುವೆಯಲ್ಲಿನ ಒಂದು ಕಠಿಣ ಸಮಯವಾಗಿರಬಹುದು.
ಕುಂಭ ರಾಶಿ
ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಪ್ರೇಮ ಜೀವನವಾಗಿ ಮದುವೆಯ ಪ್ರಸ್ತಾಪ ಜೀವನಪೂರ್ಣದ ಬಂಧದಲ್ಲಿ ಬದಲಾಗಬಹುದು. ನಿಮ್ಮಲ್ಲಿ ಕೆಲವರು ದೂರದ ಪ್ರಯಾಣವನ್ನು ಕೈಗೊಳ್ಳುತ್ತೀರಿ-ಇದು ಒತ್ತಡದಿಂದ ಕೂಡಿದ್ದರೂ ಹೆಚ್ಚು ಲಾಭದಾಯಕವಾಗಿರುತ್ತದೆ. ನೀವು ಮತ್ತು ನಿಮ್ಮ ಸಂಗಾತಿ ಇಂದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ನೆನಪುಗಳನ್ನು ರಚಿಸುತ್ತೀರಿ.
ಮೀನ ರಾಶಿ
ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಶೀರ್ವಾದ ಮಾಡುತ್ತಾರೆ ಮತ್ತು ಮನಸ್ಸಿನ ಶಾಂತಿ ತರುತ್ತಾರೆ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಕರೆ ಪಡೆಯುತ್ತೀರಿ ಹಾಗೂ ಇದು ನಿಮಗೆ ರೋಮಾಂಚಕ ದಿನವಾಗಿರುತ್ತದೆ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ವೈವಾಹಿಕ ಜೀವನವನ್ನು ಉತ್ತಮವಾಗಿಸುವ ನಿಮ್ಮ ಪ್ರಯತ್ನಗಳು ಇವತ್ತು ನಿರೀಕ್ಷೆಗೂ ಮೀರಿ ಫಲ ನೀಡುತ್ತವೆ.