ನವದೆಹಲಿ: ಇಂದು ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ನರೇಂದ್ರ ಮೋದಿಯವರು, ಅಟಲ್ ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದರು. ಜನ ಸಂಘವನ್ನು ಸ್ಥಾಪಿಸಿದ್ದರು. ಆದರೆ ಪ್ರಜಾಪ್ರಭುತ್ವದ ರಕ್ಷಣೆಯ ಸಂದರ್ಭ ನಿರ್ಮಾಣವಾದಾಗ ವಾಜಪೇಯಿ ಸೇರಿದಂತೆ ಪ್ರಮುಖ ನಾಯಕರು ಜನತಾ ಪಾರ್ಟಿಯನ್ನು ಸೇರಿಕೊಂಡರು. ನಂತರ ಅದನ್ನು ತೊರೆದು ಬಿಜೆಪಿಯನ್ನು ಸ್ಥಾಪಿಸಿಕೊಂಡರು ಎಂದು ಜ್ಞಾಪಿಸಿಕೊಂಡರು ಎನ್ನಲಾಗಿದೆ.

ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ತತ್ವಗಳನ್ನು ಪಾಲಿಸುತ್ತೇನೆ. ಇದೇ ಮಂಗಳವಾರ ವಾಜಪೇಯಿಯವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ..

RELATED ARTICLES  ರಾಹುಲ್ ಭೇಟಿಗೆ ಸ್ಥಳಾವಕಾಶ ಹೊಂದಿಸಲು ಛಿದ್ರವಾಯ್ತು ಗೋಡೆ!

ದೀರ್ಘ ಅನಾರೋಗ್ಯಕ್ಕೆ ತುತ್ತಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅಜಾತಶತ್ರು ಎಂದೇ ಕರೆಯಿಸಿಕೊಂಡಿದ್ದ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿತ್ತು. 1924ರ ಡಿಸೆಂಬರ್ 25 ರಂದು ಜನಿಸಿದ್ದ ಅವರಿಗೆ ಇದೇ ಮಂಗಳವಾರ 94ನೇ ಹುಟ್ಟುಹಬ್ಬದ ನಿಮಿತ್ತ ಕೇಂದ್ರ ಸರ್ಕಾರ ಅವರ ಸ್ಮರಣಾರ್ಥವಾಗಿ ನಾಣ್ಯ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.

ಸಮಾರಂಭಕ್ಕೆ ವಾಜಪೇಯಿಯವರೊಂದಿಗೆ ದೀರ್ಘ ಕಾಲ ಒಡನಾಟ ಹೊಂದಿದ್ದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸಿದ್ದರು ಎಂದು ತಿಳಿದುಬಂದಿದೆ.

RELATED ARTICLES  ಶೌಚಾಲಯದಲ್ಲಿ ಬಚ್ಚಿಡಲಾಗಿತ್ತು ಬರೋಬ್ಬರಿ 7 ಕೋಟಿ ರೂಪಾಯಿ

ನಾಣ್ಯದ ವಿಶೇಷತೆ ಹೇಗಿದೆ ಗೊತ್ತಾ?

* ನಾಣ್ಯದ ಒಂದು ಬದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರ ಹಾಗೂ ಹೆಸರನ್ನು ಇಂಗ್ಲೀಷ್ ಹಾಗೂ ದೇವನಗರಿ ಭಾಷೆಯಲ್ಲಿ ಮುದ್ರಿಸಲಾಗಿದೆ.
* ವಾಜಪೇಯಿ ಯವರ ಹುಟ್ಟು ಹಾಗೂ ನಿಧನದ ವರ್ಷವನ್ನು ಭಾವಚಿತ್ರದ ಕೆಳಗೆ ಮುದ್ರಿಸಲಾಗಿದೆ.
* ಸಂಪೂರ್ಣ ನಾಣ್ಯವನ್ನು ಶೇ.50 ರಷ್ಟು ಬೆಳ್ಳಿ, ಶೇ.40 ರಷ್ಟು ತಾಮ್ರ, ಶೇ.5ರಷ್ಟು ನಿಕ್ಕಲ್ ಹಾಗೂ ಶೇ.5ರಷ್ಟು ಜಿಂಕ್ ಬಳಸಿ ನಿರ್ಮಿಸಲಾಗಿದೆ.
* ಒಂದು ನಾಣ್ಯದ ಸಂಪೂರ್ಣ ತೂಕ 135 ಗ್ರಾಂಗಳಷ್ಟು ಹೊಂದಿದೆ.
* ನಾಣ್ಯದ ಮತ್ತೊಂದು ಭಾಗದಲ್ಲಿ ಮೂರು ಸಿಂಹಗಳುಳ್ಳ ಅಶೋಕ ಸ್ತಂಭದ ಚಿಹ್ನೆಯ ಜೊತೆಗೆ ಸತ್ಯಮೇವ ಜಯತೆಯನ್ನು ಮುದ್ರಿಸಲಾಗಿದೆ.
* ನಾಣ್ಯದ ಎಡಬಲದಲ್ಲಿ ದೇವನಗರಿ ಲಿಪಿಯಲ್ಲಿ ಭಾರತ ಎಂದು ಮುದ್ರಿಸಿದ್ದರೆ, ಬಲ ಬದಿಯಲ್ಲಿ ಇಂಡಿಯಾ ಎಂದು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿದೆ.