ಶ್ರೀ ಯಶೋಧರ ನಾಯ್ಕ ಟ್ರಸ್ಟ್ (ರಿ) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂತೇಗುಳಿ ಇವರ ಸಹಯೋಗದಿಂದ ಕೂಜಳ್ಳಿಯ ವ್ಯವಸಾಯ ಸೇವಾ ಸಹಕಾರಿ ಸಭಾಭವನದಲ್ಲಿ ಡೆಂಗ್ಯು ಜ್ವರ ನಿಯಂತ್ರಣ ಮತ್ತು ಜವಾಬ್ದಾರಿ ಬಗ್ಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ಕಿಶೋರ ಚಂದಾವರ ಕಾರ್ಯಕ್ರಮದ ಉದ್ಘಾಟನೆ ಮಾಡಿ ಡೆಂಗ್ಯು ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ನಾಯ್ಕ, ಹಿರಿಯ ಆರೋಗ್ಯ ಸಹಾಯಕರಾದ ದಿನೇಶ ಜಿ. ಕ್ಷೇತ್ರ ಆರೋಗ್ಯ ಸಹಾಯಕರಾದ ಪಾರ್ವತಿ, ಕಿರಿಯ ಆರೋಗ್ಯ ಸಹಾಯಕಿ ಶೋಭಾ ಹುಲ್ಸವಾರ, ಆಶಾಕಾರ್ಯಕರ್ತರು, ಟ್ರಸ್ಟ್ ನ ಸಂಪನ್ಮೂಲ ವ್ಯಕ್ತಿಯಾದ ರೇಖಾ, ಮೇಲ್ವಿಚಾರಕರಾದ ವಿನಾಯಕ ಪಟಗಾರ, ದಿನೇಶ ಭಂಡಾರಿ, ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಮ್ಮಿಕೊಂಡು ಮಾಹಿತಿಯನ್ನು ಪಡೆದುಕೊಂಡರು.

RELATED ARTICLES  ಅಂಕೋಲಾ ಸಮೀಪ ಕಾರು ಪಲ್ಟಿ : ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಪತ್ನಿ ಸಾವು