ಬಾಗಲಕೋಟೆ: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮದಿನವನ್ನು ಬಾಗಲಕೋಟೆ ನಗರದಲ್ಲಿ ಬಿಜೆಪಿ ಘಟಕದ ವತಿಯಿಂದ ಆಚರಿಸಲಾಯಿತು. ಇದೆ ವೇಳೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೇರಿದಂತೆ ಬಿಜೆಪಿ ಮುಖಂಡರು ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಎಂದು ತಿಳಿದುಬಂದಿದೆ.
ಆ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು, ನಮ್ಮ ನಡುವೆ ಇದ್ದು ಹೋದಂತ ಮಹಾನ ವ್ಯಕ್ತಿತ್ವ ಅಟಲ್ ಜೀಯವರದ್ದು,ಕಪಟ,ಮೋಸ ಇರಲಿಲ್ಲ, ಬಾಲ್ಯದಲ್ಲಿ ಮಗು ಹೇಗೆ ಇರುತ್ತೋ ಅದೆ ರೀತಿ ಅಟಲ್ ಜೀ ಸ್ವಚ್ಛ ಸ್ವಭಾವನ್ನು ಜೀವನ ಪೂರ್ತಿ ಹೊಂದಿದ್ದವರು ಎಂದರು.
ಮೊದಲು ನನಗೆ ಈ ರಾಜಕಾರಣ ಹಿಡಿಸಿರಲಿಲ್ಲ. ರಾಜಕಾರಣದ ಒಳಕಿಟಕಿ, ಹೊರಕಿಟಕಿಗಳು ತಿಳಿದಿರಲಿಲ್ಲ, ರಾಜಕೀಯ ಬೇಡ ಅಂತಾ ರಾಜೀನಾಮೆ ಕೊಟ್ಟಿದ್ದೆ, ಆಗ ಅಟಲ್ ಜೀ ನನ್ನ ಕರೆದು ತಿಳಿಸಿ ಹೇಳಿದ್ರು,ಅಟಲ್ ಜೀ ಒಬ್ಬ ಪ್ರಧಾನಿ ಅಂತಲ್ಲ, ಬಿಜೆಪಿ ನಾಯಕ ಅಂತಲ್ಲ, ವಾಜಪೇಯಿ ಅವರು ಈ ದೇಶ ಕಂಡ ಶ್ರೇಷ್ಠ ವ್ಯಕ್ತಿ ಎಂದರು. ಅಟಲ್ ಜೀ ಅವರಿಗೆ ಶಬ್ದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ಅಟಲ್ ಜೀ ಜೀವನ ಸಾಧನೆ ಬಗ್ಗೆ ಅನಂತಕುಮಾರ್ ಹೆಗಡೆಯವರು ಹೇಳಿದ್ದಾರೆ ಎಂದು ವರದಿಯಾಗಿದೆ.