ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕರಾಟೆಯ ಕಟಾ ಮತ್ತು ಕಮಿಟೆ ಸ್ಪರ್ಧೆಗಳಲ್ಲಿ ಅದ್ವಿತೀಯ ಸಾಧನೆ ಮೆರೆದು ಎರಡು ಚಿನ್ನ, ಐದು ಬೆಳ್ಳಿ ಹಾಗೂ ಎಂಟು ಕಂಚಿನ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.

RELATED ARTICLES  ದುಡ್ಡಿನ ಚೀಲ ಹಿಡಿದು ಬಂದು ನಮ್ಮ ಜನರನ್ನು ಖರೀದಿಸಿ ಓಟು ತಗೊಂಡು ಶಾಸಕನಾಗಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ : ದಿನಕರ ಶೆಟ್ಟಿ.

ಹರ್ಷ, ದರ್ಶನ ಎಸ್., ಪ್ರಹ್ಲಾದ್, ನಿರಂಜನ್, ಶಶಾಂಕ ಎನ್., ಶಶಾಂಕ್ ಕೆ., ಶಶಾಂಕ್ ಎಸ್., ಚಂದನ, ಅಶ್ವಿನ್, ದೀಕ್ಷಾ, ತನುಜಾ, ಭೂಮಿಕಾ ಅವರು ಇತ್ತೀಚೆಗೆ ಭಟ್ಕಳದ ಅರಸಿಕೇರಿಯ ನಿಚ್ಚಲಮಕ್ಕಿಯ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಡೆದ ಮೊದ¯ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಸಿ ಪದಕ ಹಾಗೂ ಪ್ರಶಸ್ತಿ ಪತ್ರದಿಂದ ಪುರಸ್ಕøತರಾಗಿದ್ದಾರೆ.

RELATED ARTICLES  ಎರಡು ಲಾರಿಗಳ ನಡುವೆ ಭೀಕರ ಅಪಘಾತ : ಓರ್ವ ಸಾವು.

ಕರಾಟೆ ಗುರು ದಯಾನಂದ ನಾಯ್ಕ, ದೈಹಿಕ ಶಿಕ್ಷಕ ಎಲ್.ಎನ್.ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು ಮತ್ತು ಎಲ್ಲ ಶಿಕ್ಷಕಸಿಬ್ಬಂದಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.