ಹೊರ ಹೋಗುವಾಗ ವಾಂತಿ ಪ್ರಾಯಾಣ ಮಾಡುವಾಗ ವಾಂತಿಯಾಗುವುದು ಸಾಮಾನ್ಯ ಸಮಸ್ಯೆ, ಹೌದು ಈ ಸಮಸ್ಯೆಯಿಂದ ಎಷ್ಟೋ ಮಂದಿ ಪಾಪ ಎಲ್ಲಿಯೂ ಹೋಗದೆ ಮನೆಯಲ್ಲಿರುತ್ತಾರೆ ಹಾಗಾಗಿ ಇಂತಹ ಸಮಸ್ಯೆಯಿಂದ ದೊರವಿರಲು ಇಲ್ಲಿದೆ ಸೂಕ್ತ ಪರಿಹಾರ ಇಲ್ಲಿದೆ ನೋಡಿ.
ನೀವು ಸೇವಿಸುವ ಆಹಾರದಿಂದಲೂ ವಾಂತಿಯಾಗೋದು ಸಹಜ, ಹಾಗಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚು ಮಸಾಲೆ ಪದಾರ್ಥವನ್ನು ತಿನ್ನೋದು ಬಿಡಿ. ಆದಷ್ಟು ಬಸ್ ಅಥವಾ ಕಾರಿನ ಮುಂಭಾಗದಲ್ಲಿ ಕುಳಿತುಕೊಳ್ಳುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು.
ಪ್ರಯಾಣ ಬೆಳೆಸೋಕು ಎರಡು ಗಂಟೆಗಳ ಮುನ್ನ ಆಹಾರ ಸೇವನೆ ಮಾಡಿ. ವಾಹನ ಏರುವ ಸಂದರ್ಭದಲ್ಲಿ ಬಾಯಿಗೆ ಒಂದು ಏಲಕ್ಕಿ ಹಾಕಿಕೊಳ್ಳಿ. ಇದು ನಿಮ್ಮ ವಾಕರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನಿಂಬೆಹಣ್ಣು ಕೈಯಲ್ಲಿಟ್ಟು ಅದರ ವಾಸನೆಯನ್ನು ಕುಡಿಯುತ್ತ ಇರಿ ಇದಲ್ಲದೆ ಆರೇಂಜ್, ಮಾವಿನ ಹಣ್ಣು ಫ್ಲೇವರ್ ಇರುವ ಚಾಕೋಲೇಟ್ ಸೇವನೆ ಮಾಡಿ. ಆದಷ್ಟು ಈ ಸಮಯದಲ್ಲಿ ನೀರಿನ ಅಂಶವಿರುವ ಪದಾರ್ಥಗಳನ್ನ ಸೇವನೆ ಮಾಡುವುದು ಉತ್ತಮ. ವಾಹನದಲ್ಲಿ ಕುಳಿತುಕೊಂಡಾಗ ಕಾಲುಗಳನ್ನು ಉದ್ದ ಚಾಚಿ ಕುಳಿತುಕೊಳ್ಳಿ ಅಥವಾ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಾಲಿನ ಪದಾರ್ಥಗಳನ್ನು ತಿನ್ನಬೇಡಿ.