ಕುಮಟಾ:ಇತ್ತೀಚಿಗೆ ಹೊಳೆಗದ್ದೆಯ ಶ್ರೀ ಶಾಂತಿಕಾಂಬಾ ಸಭಾಭವನದಲ್ಲಿ ಜಿ.ಎಸ್.ಬಿ.ಸೇವಾ ಟ್ರಸ್ಟ (ರಿ.) ಹೊಳೆಗದ್ದೆ ವತಿಯಿಂದ 7ನೇ ವರ್ಷದ ಶಿಷ್ಯವೇತನ ವಿತರಣಾ ಸಮಾರಂಭ ನಡೆಯಿತು. ದಂಪತಿಗಳಾದ ಶ್ರೀಮತಿ ಶ್ವೇತಾ ಮತ್ತು ಶ್ರೀ ಶ್ರೀನಿವಾಸ ಗೋವರ್ಧನ ಶ್ಯಾನಭಾಗ (ಸಂಶಿ) ಆಸ್ಟ್ರೇಲಿಯಾ ಇವರು ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಗಜಾನನ ನಾಗೇಶ ಪೈ ಜಿಲ್ಲಾ ಪಂಚಾಯತ ಸದಸ್ಯರು, ಮೂರೂರು ಇವರು ಮಾತನಾಡಿ ಪ್ರತಿಯೊಬ್ಬರೂ ಏಕತೆಯಿಂದ ಸಮಾಜದ ಏಳಿಗೆಗೆ ಶ್ರಮಿಸಬೇಕು ಮತ್ತು ವೈರತ್ವದಿಂದ ದೂರ ಇರಬೇಕು ಎಂದು ಮಾರ್ಮಿಕವಾಗಿ ನುಡಿದರು. ಮತ್ತೊರ್ವ ಮುಖ್ಯ ಅತಿಥಿಗಳಾದ ಶ್ರೀ ರಾಜೀವ ಗೋವಿಂದ ಶ್ಯಾನಭಾಗ ಪ್ರಧಾನ ವ್ಯವಸ್ಥಾಪಕರು, ಅರ್ಬನ್ ಬ್ಯಾಂಕ್ ಹೊನ್ನಾವರ ಇವರು ಮಾತನಾಡಿ ಸಾರಸ್ವತ ಸಮಾಜದವರಾದ ನಾವೆಲ್ಲರೂ ಉತ್ತಮ ಸಂಸ್ಕøತಿ, ನಡತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಸಲಹೆ ನೀಡಿದರು.
ಇನ್ನೊರ್ವ ಮುಖ್ಯ ಅತಿಥಿಗಳಾದ ಶ್ರೀ ಶ್ರೀನಿವಾಸ ದಾಮೋದರ ಮಹಾಲೆ ಎಪಿಎಮ್‍ಸಿ ಸದಸ್ಯರು, ಹೊನ್ನಾವರ ಇವರು ಮಾತನಾಡಿ ಚಿಕ್ಕ ಸಮಾಜವಾದರೂ ಸ್ಮರಣ ೀಯ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಗೋಪಿನಾಥ ಮಠ ಹಳದಿಪುರದ ವ್ಯಾಪ್ತಿಯಲ್ಲಿ ಬರುವ 37 ವಿದ್ಯಾರ್ಥಿಗಳಿಗೆ 36 ಸಾವಿರ ರೂಪಾಯಿ ಶಿಷ್ಯವೇತನ ಮತ್ತು ಇಬ್ಬರಿಗೆ 13 ಸಾವಿರ ರೂಪಾಯಿ ವೈದ್ಯಕೀಯ ಸಹಾಯ ಧನವನ್ನು ವಿತರಿಸಲಾಯಿತು. ಕಾಮತ್ ಸುಪಾರಿ ಟ್ರೇಡರ್ಸನ ಮಾಲಕರಾದ ಶ್ರೀ ಮೋಹನ ಗಣಪತಿ ಕಾಮತ್ ಹೊಳೆಗದ್ದೆ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗಣೇಶ ಪೈ ಸ್ವಾಗತಿಸಿದರು. ಸುಬ್ರಾಯ ಶ್ಯಾನಭಾಗ ವರದಿ ವಾಚಿಸಿದರು. ದೀಪಕ ಕಾಮತ ಶಿಷ್ಯವೇತನ ಯಾದಿ ಪ್ರಕಟಿಸಿದರು. ಅನಂತ ಕಾಮತ ವಂದಿಸಿದರು. ಗಜಾನನ ಶ್ಯಾನಭಾಗ ಧಾರೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಶುಭ ಸಂದರ್ಭದಲ್ಲಿ ಅರವಿಂದ ಪೈ ಅಳ್ವೆಕೋಡಿ, ಪ್ರಮೋದ ಪ್ರಭು ಕುಮಟಾ, ಆನಂದು ಶ್ಯಾನಭಾಗ ಧಾರೇಶ್ವರ, ಮೋಹನದಾಸ್ ಶ್ಯಾನಭಾಗ ಧಾರೇಶ್ವರ, ನರಸಿಂಹ ಶ್ಯಾನಭಾಗ, ಗೋವಿಂದರಾಯ ಶ್ಯಾನಭಾಗ, ನಾಗೇಶ ಬಾಳಗಿ, ಮರ್ತಪ್ಪಾ ಪೈ, ವೈಕುಂಠ ಪೈ, ಬಾಬಣ್ಣ ಪೈ, ಕೃಷ್ಣಾನಂದ ಪೈ, ನೀಲಕಂಠ ಪೈ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.