ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ದಿನಾಂಕ 28/12/2018 ರಂದು ಪ್ರತಿಭಾವಂತ ಯುವಸಾಹಿತಿ ಶ್ರೀಯುತ ಸಂದೀಪ ಎಸ್ ಭಟ್ಟರವರ ಹದಿನೆಂಟನೆ ಕೃತಿ ‘ನಂಗಳೊಳಗೇಯ’ ಅನಾವರಣಗೊಳ್ಳಲಿಕ್ಕಿದೆ.
ಹವ್ಯಕ ಭಾಷೆಯಲ್ಲಿಯೇ ರಚಿತವಾದ ಈ ಕೃತಿ ಹವ್ಯಕರ ಅಡುಗೆ, ಉಡುಗೆ, ಭಾಷೆ, ಸಂಸ್ಕೃತಿ, ಮಂತ್ರ, ಇತ್ಯಾದಿ ಅನೇಕ ವಿಷಯಗಳ ಬಗೆಗೆ ಬೆಳಕು ಚೆಲ್ಲಲಿದೆ. ಅವರದೇ ವಿಭಿನ್ನ ಶೈಲಿಯಿಂದ ಪ್ರಚಲಿತರಾಗುವ ಸಂದೀಪರ ಈ ಕೃತಿ ತನ್ನದೇ ಆದ ಸಾಹಿತ್ಯಿಕ ಮೌಲ್ಯ ಹೊಂದಿದ್ದು ಓದುಗರನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಂಬುದರಲ್ಲಿ ಸಂಶಯವಿಲ್ಲ.
ನಂಗಳೊಳಗೇಯ ಎಂಬ ಶೀರ್ಷಿಕೆ ಯೇ ಅವರ ಪುಸ್ತಕದ ಹೈಲೈಟ್. ಕಥೆ,ಕವನ, ನಾಟಕ, ಕಾದಂಬರಿ, ವ್ಯಾಕರಣ, ಚೌಪದಿ, ಹೀಗೆ ಸಾಹಿತ್ಯದ ಹತ್ತಾರು ಮಜಲುಗಳಲ್ಲಿ ಕೈಯಾಡಿಸಿದ ಯುವಸಾಹಿತಿಯ ಈ ಪುಸ್ತಕ ಆಸಕ್ತರಿಗೆ ರಸದೌತಣ ನೀಡಲಿ ಎಂಬ ಆಶಯ ನಮ್ಮದು. ವಿಶ್ವ ಹವ್ಯಕ ಸಮ್ಮೇಳನದ ಈ ಸವಿಘಳಿಗೆಯಲ್ಲಿ ನಂಗಳೊಳಗೇಯ ಕೃತಿ ಬಿಡುಗಡೆಯಾಗುತ್ತಿರುವುದು ಸಂತಸದಾಯಕ ಮತ್ತು ಅರ್ಥಪೂರ್ಣ.