ಹೊನ್ನಾವರ: ಪಂಚಾಯತ ರಾಜ್ ವಿಭಾಗದಲ್ಲಿ ಸಾಕಷ್ಟು ಯೋಜನೆಗಳು ಬಂದಿದ್ದರೂ ಸಹ ಉದ್ಯೋಗ ಖಾತ್ರಿ ಯೋಜನೆಯಷ್ಟು ವ್ಯಾಪಕವಾದ ಮತ್ತು ಜನಾನುರಾಗಿಯಾದ ಜನಪ್ರೀಯವಾದ ಯಾವ ಯೋಜನೆಗಳು ಬಂದಿರಲಿಲ್ಲ ಇದು ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಆಶಾ ಕಿರಣ ಮೂಡಿಸಿದ ಯೋಜನೆಯಾಗಿದೆ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ನುಡಿದರು. ಅವರು ಹೊನ್ನಾವರ ತಾಲೂಕಿನ ಕಡತೋಕಾ ಪಂಚಾಯತಿಯಲ್ಲಿ ಇಂದು ಶುಕ್ರವಾರ ನಡೆದ 2018-19ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಂದೆರಡು ಜನಗಳಿಗೆ ತಾಂತ್ರಿಕ ಕಾರಣಗಳಿಂದ ಕೂಲಿ ವಿಳಂಭವಾದ ಮಾತ್ರಕ್ಕೆ ಯೋಜನೆಯನ್ನೇ ದೂಷಿಸುವುದು ಅರ್ಥಹೀನ ಗ್ರಾಮೀಣ ಜನರೇ ಹೇಳುವಂತೆ ಕೆಲಸವಿಲ್ಲದೇ ಕಂಗಾಲಾದ ಬಡಜನರ ಪಾಲಿಗೆ ಖಾತ್ರಿ ಯೋಜನೆ ಹೊಸ ಚೈತನ್ಯ ಮೂಡಿಸಿದೆ ಎಂದರು. ಯೋಜನೆ ರಾತ್ರೋ ರಾತ್ರಿ ಗ್ರಾಮದ ಎಲ್ಲ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸದೇ ಇದ್ದರೂ ಸಹ ಬಡವರ ಮನೆಯ ಹಣತೆಯಂತೆ ಒಂದಷ್ಟು ಬೆಳಕು ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ಸಾಮಾಜಿಕ ಪರಿಶೋಧನೆಯಿಂದ ನರೇಗಾ ಯೋಜನೆಯಲ್ಲಿ ಸ್ಪಷ್ಟತೆ ಕಾಣುವಂತಾಗಿದ್ದು, ಪಾರದರ್ಶಕತೆ ಸಹ ಕಾಣಲು ಸಾಧ್ಯವಾದಂತಾಗಿದೆ ಎಂದು ನಂತರ ಸಾಮಾಜಿಕ ಪರಿಶೋಧನಾ ವರದಿಯನ್ನು ಮಂಡಿಸಿ ಸಭೆಯ ತೀರ್ಮಾನಕ್ಕೆ ಬಿಡಲಾಯಿತು.
ಯೋಜನೆಯ ನಿಯಮದಂತೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎನ್.ನಾಯ್ಕ ಮಾತನಾಡಿ ತಮ್ಮ ಇಲಾಖೆಂiಯ್ಕೀ ಭಾಗದಲ್ಲಿ ಕೈಗೊಂಡ ಕಾಮಗಾರಿಗಳು ತಿಳಿಸಿದರು. ಮತ್ತು ಇಲಾಖೆಯಲ್ಲಿನ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಬದಲ್ಲಿ ಪಂಚಾಯತಿಯ ಉಪಾಧ್ಯಕ್ಷ ಮಂಜುನಾಥ ಶಂಭು ಹೆಗಡೆ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ನಮ್ಮ ಭಾಗದಲ್ಲಿ ಅತ್ತಯಂತ ಉಪಯುಕ್ತವಾದದ್ದು. ಕೃಷಿ ಉಪಯೋಗಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಯೋಜನೆಯಲ್ಲಿ ಅನುಪಾತದಲ್ಲಿ ಸ್ವಲ್ಪ ಬದಲಾವಣೆ ಆದಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಕಾಮಗಾರಿ ಮಾಡಲು ಅವಕಾಶವಾದಿತು. ಅತ್ಯಂತ ಸ್ಪಷ್ಟವಾಗಿ ಖಾತ್ರಿ ಯೋಜನೆ ಪರಿಕಲ್ಪನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಮುಂಡಳ್ಳಿಯವರ ಪ್ರಯತ್ನ ಸ್ಲಾಘನೀಯ ಮತ್ತು ಈ ದಿಶೆಯಲ್ಲಿ ಅವರು ಅಭಿನಂದನಾರ್ಹರು ಎಂದರು. ಮತ್ತು ಅವರ ಸಹಾಯದಿಂದ ತಮ್ಮ ಭಾಗದ ಪ್ರತಿ ಗ್ರಾಮದಲ್ಲಿಯೂ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಸಭೆಗೆ ತಿಳಿಸಿದರು. ಇದಕ್ಕೆ ಸಭೆಯಲ್ಲಿ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಬಗೆಗಿನ ಅನೇಕ ಗೊಂದಲಗಳ ಬಗ್ಗೆ ಪ್ರಶ್ನಿಸಲು ಅವಕಾಶ ಕಲ್ಪಿಸಲಾಯಿತು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಕುರಣ ಎಲ್ಲರನ್ನೂ ಸ್ವಾಗತಿಸಿ ಹಿಂದಿನ ಸಭೆಯ ನಡಾವಳಿ ಓದಿ ನಂತರ ಎಪ್ಪಿಲ್ ನಿಂದ ಸೆಪ್ಟಂಬರ್ ವರೆಗೆ ನಡೆಸಲಾದ ಕಾಮಗಾರಿಗಳನ್ನು ಸಭೆಗೆ ಓದಿ ಹೇಳಿದರು.