ಕುಮಟಾ: ಹಿರೇಗುತ್ತಿಯ ಲಲಿತಾ ಸಭಾಭವನದಲ್ಲಿ ವಿದ್ಯಾರ್ಥಿಗಳು, ಪಾಲಕರು, ಹಾಗೂ ಊರ ನಾಗರಿಕರ ಸಮ್ಮುಖದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಉದ್ಘಾಟನಾ ಮಾತನಾಡಿದ ಕಾಲೇಜ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿಯವರು. ವಿದ್ಯಾರ್ಥಿಗಳು ಯೋಚಿಸಿ, ಯೋಜನೆಮಾಡಿ ಪರಿಶ್ರಮ ಪಟ್ಟರೆ ಯಶಸ್ಸು ಗಳಿಸಲು ಸಾಧ್ಯ ಎಂದು ಸರ್ದಾರ ವಲ್ಲಭಬಾಯಿ ಪಟೇಲ್‍ರ ಆದರ್ಶವನ್ನು ಉದಾರಿಸಿ ಹೇಳಿದರು.

ಜಿಲ್ಲಾ ಪಂಚಾಯತ ಸದಸ್ಯರಾದ ಪ್ರದೀಪ ಡಿ ನಾಯಕರವರು ಮಾತನಾಡಿ “ಎಲ್ಲರಲ್ಲೂ ಪ್ರತಿಭೆ ಇದೆ” ಎಂಬುವುದಕ್ಕೆ ಕೊನೆಯ ಬೆಂಚಿನಲ್ಲಿ ಕುಳಿತು ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ರವರನ್ನು ಉದಾರಿಸಿ ಮಾತನಾಡಿದರು.

RELATED ARTICLES  ಬೀದಿ ನಾಯಿಗಳ ಹಾವಳಿ: ಕಾರವಾರದ ಜನರಲ್ಲಿ ಹೆಚ್ಚುತ್ತಿದೆ ಆತಂಕ!

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ಗಣಪತಿ ಎನ್. ನಾಯಕ “ಲಿಸನ್, ಲರ್ನ, & ಲೀಡ್- ಕೇಳಿ, ಕಲಿತು, ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ ಮತ್ತು ದುಶ್ಚಟಗಳಿಂದ ದೂರವಿರಿ” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶೀ ಸಣ್ಣಪ್ಪ ಎಂ. ನಾಯಕ, ತಾಲೂಕ ಪಂಚಾಯತ ಸದಸ್ಯರಾದ ಶ್ರೀ ರಾಜೇಶ ನಾಯಕ, ಊರ ಪ್ರಮುಖರಾದ ರಾಜೀವ ಗಾಂವಕರ, ರಾಮೂ ಕೆಂಚನ್, ರೋಹಿದಾಸ ಗಾಂವಕರ, ಲಕ್ಷ್ಮೀಧರ ಗಾಂವಕರ, ಶೇಖರ ಹರಿಕಂತ್ರ, ವಿಠೋಬ ಹರಿಕಂತ್ರ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀಯುತ ಪ್ರೇಮಾನಂದ ಎಚ್. ಗಾಂವಕರ ವಹಿಸಿದ್ದರು.

RELATED ARTICLES  ನದಿಯಲ್ಲಿ ಮುಳುಗಿ ಯುವಕನ ಸಾವು :ಕುಮಟಾದ ದೀವಗಿಯಲ್ಲಿ ದುರ್ಘಟನೆ

ಈ ಕಾರ್ಯಕ್ರಮದಲ್ಲಿ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಮೃತಾ ರಾಯ್ಕರ, ಹಾಗೂ ಸಚಿನ್ ಓಮು ನಾಯ್ಕ ರವರನ್ನು ಹಾಗೂ ನಿವೃತ್ತಿ ಹೊಂದಲಿರುವ ಉಪನ್ಯಾಸಕರಾದ ಶ್ರೀ ನಾರಾಯಣ ಎಲ್. ಹೆಗಡೆ, ಹಾಗೂ ಶ್ರೀಮತಿ ಉಷಾ ಬೊಮ್ಮಯ್ಯ ನಾಯಕ ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ವಿಜಯ ನಾಯಕ ಸರ್ವರನ್ನು ಸ್ವಾಗತಿಸಿದರು. ಸ್ವಾಗತ ಗೀತೆಯನ್ನು ಶ್ರೇಯಾ ಸಂಗಡಿಗರು ಹಾಡಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶ್ರೀಮತಿ ಸುಕನ್ಯಾ ಭಟ್ ಹಾಗೂ ಶ್ರೀಮತಿ ಪಾರ್ವತಿ ಎಚ್ ಪಟಗಾರ ನಡೆಸಿಕೊಟ್ಟರು. ಶ್ರೀಮತಿ ನೇತ್ರಾವತಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.