ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತೆ ಏರಿಳಿತವಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯಿಂದ ಉಸಿರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಗಳಿಗೆ ಕಫ ಹೆಚ್ಚಾಗಿ ಉಸಿರಾಟದಲ್ಲಿ ಸ್ವಲ್ಪ ಏರಿಳಿತವಾಗಿದ್ದು, ಶ್ರೀಗಳು ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದಾರೆ. ವೈದ್ಯರು ಶ್ರೀಗಳಿಗೆ ಮೂಗಿನ ಮೂಲಕ ಗ್ಲೂಕೋಸ್ ನೀಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಹೈಯರ್ ಆಂಟಿಬಯೋಟಿಕ್ ಹಾಗೂ ಫಿಸಿಯೋತೆರಪಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

RELATED ARTICLES  ಕುಮಟಾ, ಹೊನ್ನಾವರದಲ್ಲಿ ಕೊರೋನಾ ಲಸಿಕೆ ವಿತರಣಾ ಮಾಹಿತಿ

ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ಬೆಂಗಳೂರಿಗೆ ಕರೆತರಬೇಕೆ ಎಂಬ ಬಗ್ಗೆ ವೈದ್ಯರು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 11-11-2018 ರ ರಾಶಿ ಭವಿಷ್ಯ ಇಲ್ಲಿದೆ