ಕುಮಟಾ:ವೈವಿದ್ಯತೆ ಹಾಗೂ ಸಂಘಟನೆಗಳ ಮೂಲಕವೇ ಗುರುತಿಸಿಕೊಂಡ ಶ್ರೀ ಮೂವತ್ತಗುಂಡಿ ಜಟಗೇಶ್ವರ ಮಹಾಸತಿ ಕ್ರೀಡಾ ಬಳಗ ಬಗ್ಗೋಣ, ಜಿಲ್ಲಾ ಹಿಂದೂ ಮುಕ್ರಿ ಯುವ ವೇದಿಕೆ, ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸೇವಾ ಸಂಘ ದ ಆಶ್ರಯದಲ್ಲಿ ಜಿಲ್ಲೆಯ ಮುಕ್ರಿ ಸಮಾಜವನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಿರ್ವಾದದಿಂದ ಡಿ.29 ರಂದು ಶನಿವಾರ ಬಗ್ಗೋಣ ಮಹಾಸತಿ ಕ್ರೀಡಾಂಗಣದಲ್ಲಿ ವಿಘ್ನೇಶ್ವರ ಟ್ರೋಪಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ತನ್ನಿಮಿತ್ತ ಇಂದು ವನವಾಸಿ ಕಲ್ಯಾಣದ ಸಭಾಭವನದಲ್ಲಿ ಸಂಘಟನೆ ಸದಸ್ಯರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು.

RELATED ARTICLES  ಪುಟಾಣಿ ವಿಜ್ಞಾನಿಗಳಿಂದ ವಿಜ್ಞಾನ ದಿನ ಆಚರಣೆ ಸರಸ್ವತಿ ವಿದ್ಯಾಕೇಂದ್ರದಲ್ಲಿ ಅರ್ಥಪೂರ್ಣವಾದ ರಾಷ್ಟ್ರೀಯ ವಿಜ್ಞಾನ ದಿನ.

ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದೆ. ಹಿಂದು ಮುಕ್ರಿ ಸಮಾಜದ ಬಾಂಧವರು ಈ ಪಂದ್ಯಾವಳಿಗೆ ಹಾಗೂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿಕೊಂಡರು.

ಶಾಸಕ ದಿನಕರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿ.ಪಂ. ಸದಸ್ಯ ಪ್ರದೀಪ ನಾಯಕ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಯಮಿ ಕಿಶನ್ ವಾಳ್ಕೆಯವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಮುಕ್ರಿ ಸಮಾಜದ ಹಲವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

RELATED ARTICLES  ಶಿರಸಿ-ಹಾವೇರಿ ರಸ್ತೆ ಮೇಲ್ದರ್ಜೆಗೆ : ಮಾಹಿತಿ ನೀಡಿದ ಸಂಸದ ಅನಂತ ಕುಮಾರ ಹೆಗಡೆ.

ಈ ಸಂದರ್ಭದಲ್ಲಿ ಪ್ರಮುಖರಾದ ಎನ್. ಆರ್ ಮುಕ್ರಿ, ನಾಗರಾಜ ಮುಕ್ರಿ, ವಿಘ್ನೇಶ ಮುಕ್ರಿ, ನವೀನ ಮುಕ್ರಿ, ಗಜೇಂದ್ರ ಅಡೆಗುಂಡಿ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.