ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮೋದಿ ಸರ್ಕಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಪ್ರಮುಖ ಅನುಕೂಲಕರ ಯೋಜನೆಗಳನ್ನು ಜಾರಿ ತರಲು ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕಾಲ ಕಾಲಕ್ಕೆ ಬೆಳೆ ಸಾಲ ಮರುಪಾವತಿಸುವ ರೈತರಿಗೆ ಈಗ ನೀಡುತ್ತಿರುವ ಬಡ್ಡಿ ರಿಯಾಯಿತಿ ಬದಲಿಗೆ ಬಡ್ಡಿ ಸಂಪೂರ್ಣ ಮನ್ನಾ, ಆಹಾರ ಬೆಳೆಗಳ ವಿಮಾ ಪ್ರೀಮಿಯಂ ಮನ್ನಾ ಹಾಗೂ ತೋಟಗಾರಿಕಾ ಬೆಳೆಗಳ ವಿಮಾ ಪ್ರೀಮಿಯಂ ಮೊತ್ತ ಕಡಿತದಂತಹ ಯೋಜನೆಗಳನ್ನು ಪ್ರಕಟಿಸುವ ಸಂಬಂಧ ಪರಿಶೀಲನೆಯಲ್ಲಿ ತೊಡಗಿದೆ ಎನ್ನಲಾಗಿದೆ.

RELATED ARTICLES  ಕಾಂಗ್ರೆಸ್, ಸೋತ ಕ್ಷೇತ್ರಗಳಿಗೆ ತಲಾ ಮೂವರು ಅಭ್ಯರ್ಥಿಗಳ ಪಟ್ಟಿ ಅಂತಿಮ.

ರೈತರಿಗೆ ಶೇ. 7 ರ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ದೊರೆಯುತ್ತಿದೆ. ಅದನ್ನು ಸಕಾಲಕ್ಕೆ ಮರುಪಾವತಿಸಿದರೆ ಶೇ.3 ಬಡ್ಡಿ ರಿಯಾಯಿತಿ, ಅಂದರೆ ಒಟ್ಟಾರೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದೆ. ಸಕಾಲಕ್ಕೆ ಸಾಲ ಮರುಪಾವತಿಸುವ ರೈತರಿಗೆ ಬಡ್ಡಿರಿಯಾಯಿತಿ ನೀಡುವ ಬದಲು ಸಂಪೂರ್ಣ ಬಡ್ಡಿ ಯನ್ನೇ ಮನ್ನಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

RELATED ARTICLES  ಕೇರಳ ಮಹಿಳೆಯನ್ನು ಇಸಿಸ್'ಗೆ ಮಾರಾಟಕ್ಕೆ ಯತ್ನ: ಬೆಂಗಳೂರಿನ ಮೂವರ ವಿರುದ್ಧ ಪ್ರಕರಣ ದಾಖಲು

ರೈತ ಬಂಧು ಯೋಜನೆಗಳಿಗೆ ಪರಿಯಾಯವಾಗಿ ಬೆಳೆ ವಿಮಾ ಯೋಜನೆಯನ್ನು ಮರುವಿನ್ಯಾಸಗೊಳಿಸಬೇಕು, ರೈತರಿಗೆ ಹೆಚ್ಚು ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಮತ್ತು 1 ಲಕ್ಷ ರು.ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದ್ದಾರೆ ಎಂದು ವರದಿಯಾಗಿದೆ.