ಒಂದು ತಾಲೂಕಿನ ಮೀನು ಮಾರಾಟಗಾರರು ಬೇರೆ ತಾಲೂಕಿಗೆ ಹೋಗಿ ಮೀನು ಮಾರಾಟ ಮಾಡುವ ಬಗ್ಗೆ ಎದ್ದಿದ್ದ ಮೀನು ಮಾರಾಟಗಾರರ ಆಕ್ಷೇಪ ಇಂದು ಭುಗಿಲೆದ್ದಿದೆ.
ಹೊನ್ನಾವರ ತಾಲೂಕಿನ ಹಳದೀಪುರದ ಮೀನುಗಾರರಿಗೆ ಕುಮಟಾ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ ಹಾಗಾಗಿ ಕುಮಟಾ ಮೀನು ಮಾರಾಟಗಾರರಿಗೆ ಹಳದೀಪುರದಲ್ಲಿ ಅವಕಾಶ ನೀಡಬಾರದು ಎಂಬುದಾಗಿ ಹಳದೀಪುರದ ಮೀನುಗಾರರು ಒತ್ತಾಯಿಸುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಈ ಸಭೆಗೆ ಹಾಜರಾಗಿದ್ದ ನೂರಾರು ಜನ ಮೀನುಗಾರರು ತಮ್ಮ ಪಟ್ಟು ಸಡಿಲಿಸದೆ ಕುಮಟಾ ತಾಲೂಕಿನವರಿಗೆ ಇಲ್ಲಿಯ ಮೀನು ಮಾರುಕಟ್ಟೆಯಲ್ಲಿ ಅವಕಾಶ ನೀಡಬಾರದೆಂದು ಆಗ್ರಹಿಸಿದರು. ತೀರ್ವ ಸ್ವರೂಪದಲ್ಲಿ ಈ ಪ್ರಕರ್ಣ ಉಲ್ಬಣವಾಗುತ್ತ ಹೋದಂತೆ ಗೋಚರಿಸಿ ನಂತರ ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷರಾದ ಗಣಪತಿ ಮಾಂಗ್ರೆಯವರನ್ನು ಸಭೆಗೆ ಕರೆಸಲಾಯಿತು. ಅವರ ನೇತ್ರತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಬಡಗಣಿಯಲ್ಲಿ ಬೇರೆ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಣಯ ಕೈಗೊಳ್ಳಲಾಯಿತು. ಶಾಸಕರು ಅನುದಾನ ನೀಡುವುದಾಗಿ ಭರವಸೆ ನೀಡಿದರು ಎಂಬುದಾಗಿ ಗಣಪತಿ ಮಾಂಗ್ರೆ ತಿಳಿಸಿದರು.
ಸಭೆ ಹಾಗೂ ಸಭಾ ನಿರ್ಣಯದ ಬಗ್ಗೆ ಗ್ರಾ.ಪಂ ಅಧ್ಯಕ್ಷರಾದ ಗುಣಮಾಲಾ ಇಂದ್ರ ಪ್ರತಿಕ್ರಿಯೆ ನೀಡಿ ಪ್ರತ್ಯೇಕ ಮೀನು ಮಾರುಕಟ್ಟೆಯ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಗಾ.ಪಂ ನ ಸದಸ್ಯರು ಮತ್ತು ಮೀನುಗಾರ ಸಮಾಜದ ಅನೇಕರು ಸಭೆಯಲ್ಲಿ ಹಾಜರಿದ್ದರು.