ಸಾಧನೆಯ ಮಾರ್ಗ ಯಾವುದೇ ಸೀಮಿತ ಚೌಕಟ್ಟಿಗೊಳಪಡದೇ ಸಾರ್ವಜನಿಕರಂಗಕ್ಕೆ ಸಂಬಂಧಿಸಿದರೂ..ನಮ್ಮದೇ ಊರವರು, ನಮ್ಮದೇ ಬಂಧುಬಳಗ, ನಮ್ಮ ಗೆಳೆಯರವಲಯ,ಅಥವಾ ನಮ್ಮದೇ ಸಮುದಾಯ ನಮ್ಮ ಹೆಜ್ಜೆಗಳನ್ನು ಗುರ್ತಿಸಿ, ಗೌರವಿಸಿದಾಗ.. ವೇದಿಕೆ ಸೀಮಿತವಾದರೂ.. ಹೆಮ್ಮೆಗೆ ಕಡಿಮೆಯೇನಿಲ್ಲ !
ಹವ್ಯಕ’ರಿಗೆ ಒಗ್ಗದಂತಿದ್ದ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡಿದ್ದೇ ವಿಶೇಷವೆನ್ನುವಾಗ…
ಅಡಿಗಡಿಗೂ “ಚಾಲೆಂಜಿಂಗ್” ಎನ್ನುವಂತಿರುವ ಸಾರಿಗೆ ಕ್ಷೇತ್ರದಲ್ಲಿ ದಕ್ಷ ಹಾಗೂ ಜನಪರ ಧೋರಣೆಗಳೊಂದಿಗೆ ಮುನ್ನುಗ್ಗಿ..
ಸರಕುಸಾಗಣೆ ಮತ್ತು ಸಾರ್ವಜನಿಕಸಂಚಾರ ಕ್ಷೇತ್ರಗಳೆರಡರಲ್ಲೂ ಯಶಗಳಿಸಿ, ನಾಡಿನಾದ್ಯಂತ ಜನಮನಗೆದ್ದ ಶ್ರೀಕುಮಾರ್ ಸಮೂಹ ದಂತಹ ಸಂಸ್ಥೆಯೊಂದನ್ನು ಕಟ್ಟಿಬೆಳೆಸಿದ್ದು ನಿಜಕ್ಕೂ ಅಭಿನಂದನೀಯ.
ಎಲ್ಲ ಪೂರ್ವಾನುಕೂಲಗಳಿರುವವರು ಉದ್ಯಮವೊಂದರಲ್ಲಿ ಯಶಗಳಿಸುವುದು ಅಷ್ಟೇನೂ ಕಷ್ಟವಾಗದೇನೋ..!
ಆದರೆ ಹರೆಯದ ಹುಮ್ಮಸ್ಸು..ಕೆಲಸಮಾಡುವ ಶೃದ್ಧೆ ಅನಿವಾರ್ಯತೆಗಳನ್ನೇ ಬಂಡವಾಳಮಾಡಿಕೊಂಡವನೊಬ್ಬ , ಬದುಕಿನ ಸವಾಲುಗಳೆದುರು ಯಶಸ್ವಿ ಉದ್ಯಮಿಯಾಗಿ ಬೆಳೆದುನಿಲ್ಲುವುದು ಸಾಧಾರಣ ವಿಷಯವಲ್ಲ. ಕೇವಲ ಒಂದೇ ಸರಕುಸಾಗಣೆ ವಾಹನದೊಂದಿಗೆ /ಒಂದೇ ಕಾರಿನೊಂದಿಗಿನ ಆರಂಭದದಿನಗಳನ್ನೂ ಕಂಡ ನಾನೋ ನನ್ನಂತವರೋ ಪುಟ್ಟಣ್ಣ’ನ ಇಂದಿನ ಸಾಧನೆಗಳನ್ನು ಕಂಡು ಖುಷಿಪಡುವುದರಲ್ಲೇನೂ ವಿಶೇಷವಿಲ್ಲ.
ಅಪಾಯದಂಚಿನಲ್ಲೇ ಸಾಗಬಹುದಾದ ಅಪಾರ ಸಹನೆ-ಧೈರ್ಯ-ಜಾಣ್ಮೆ ಬಯಸುವ…ಹಲವುಬಾರಿ ನಮ್ಮ ನಿಯಂತ್ರಣಕ್ಕೆ ಸಿಗದಾದ..ಬಹುಕಾಲದ ಉಪಕಾರವನ್ನೂ ಮರೆಸಿ ನಿಂದನೆಗೂ ಒಳಗಾಗಬಹುದಾದ ಅಪಾಯದ ಕ್ಷಣಗಳನ್ನೂ ಎದುರಿಸುತ್ತಾ ಮುನ್ನಡೆಯಬೇಕಾದ ಕ್ಷೇತ್ರದಲ್ಲಿ.. ಸಮಾಜಸೇವೆಯೊಂದಿಗೆ ಸಾಕಷ್ಟು ಜನರಿಗೆ ಅನ್ನನೀಡುವ ಉದ್ಯೋಗಾವಕಾಶ ಕಲ್ಪಿಸುವದರೊಟ್ಟಿಗೆ.ಸಮಾಜಮುಖಿಯಾಗಿ ಹಲಹತ್ತು ಕಾರ್ಯವೆಸಗುತ್ತಾ…ಸಾಂಸ್ಕೃತಿಕ ರಂಗದಲ್ಲೂ ಒಬ್ಬ ಸಂಘಟಕನಾಗಿ,ಪೋಷಕನಾಗಿ ಬೆಳೆದುಬಂದ ಪರಿ..ಅಚ್ಚರಿದಾಯಕ.
ತಮಗೆ ಇನ್ನೂ ಶ್ರೇಯಸ್ಸು ದೊರೆಯುವಂತಾಗಲಿ. ಮತ್ತಷ್ಟು ಸೇವೆಯನ್ನು ಸಮಾಜ ಎದರು ನೋಡುತ್ತಿದೆ…ಸಮೂಹದ ಸಹಾಯ ಪಡೆಯುತ್ತಿರುವವರೆಲ್ಲರ ಮತ್ತು ಸಿಬ್ಬಂದಿಗಳೆಲ್ಲರ ಪ್ರಾಮಾಣಿಕ ಸಹಕಾರವೂ ಇನ್ನೂ ಹೆಚ್ಚಾಗಿ ಸಿಗುವಂತಾಗಲಿ. ದೈವಕೃಪೆಯೂ ಜೊತೆಗಿರಲೆಂದು ಹಾರೈಸುವೆ.
ಇಷ್ಟೆಲ್ಲ ನೆನಪಿಸಲು ಕಾರಣವಾದ ಹವ್ಯಕ ಮಹಾಸಭಾ ಕೂಡ ಅಭಿನಂದನೆಗರ್ಹ!ತಮ್ಮವನೊಬ್ಬನ ಸಮಾಜಮುಖಿ ಸೇವೆ..ಸಾಧನೆಗಳನ್ನು ಗುರ್ತಿಸಿ ಸಾಧಕರತ್ನ ಗಳ ಸಾಲಿನಲ್ಲಿ ಗೌರವಿಸುತ್ತಲಿರುವ ಸಂದರ್ಭದಲ್ಲಿ…ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು ಪುಟ್ಟಣ್ಣ .
ಬರಹ : ಷಣ್ಮುಖ ಕವಲಕ್ಕಿ.