ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಎರಡನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕುಮಟಾದ ಶ್ರೀ ನಾಗ ಆಯುರ್ಧಾಮದ ಸಂಸ್ಥಾಪಕರು ಹಾಗೂ ವೈದ್ಯರಾದ ಡಾ ನಾಗರಾಜ್ ಭಟ್ ಅವರು ಹವ್ಯಕ ವಿದ್ಯಾರತ್ನ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
ವಿದ್ಯಾಭ್ಯಾಸದಲ್ಲಿ ಅವರು ಮಾಡಿದ ಉತ್ಕೃಷ್ಟ ಸಾಧನೆಗಾಗಿ ಈ ಪ್ರಶಸ್ತಿ ಸಂದಿದೆ. ಇವರು 2017 ರಲ್ಲಿ ನಡೆದ ಆಯುರ್ವೇದ ಸ್ನಾತಕೋತ್ತರ ವಿಭಾಗದಲ್ಲಿ ಯೂನಿವರ್ಸಿಟಿ ಗೆ ಪ್ರಥಮ ರಾಂಕ್ ಪಡೆದಿದ್ದಾರೆ. ಹಾಗೂ ಇವರಿಂದ ಎಂಟಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಬಂಧಗಳು ಮಂಡನೆ ಗೊಂಡಿವೆ. ಈ ಪ್ರಶಸ್ತಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇನ್ನಷ್ಟು ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.