ಯಲ್ಲಾಪುರ : ಮಂಗಳೂರಿನಿಂದ ಮುಂಬಯಿಗೆ ಹೊರಟಿದ್ದ ಮಂಗಳೂರಿನ ನಿವಾಸಿಗಳನ್ನು ಒಳಗೊಂಡಿದ್ದ ಕಾರೊಂದು ಯಲ್ಲಾಪುರದ ವಜ್ರಳ್ಳಿ ಬಳಿ ಪಲ್ಟಿ ಹೊಡೆದ ಬಗ್ಗೆ ಇದೀಗ ವರದಿಯಾಗಿದೆ.
ಚಾಲಕನ ಅತಿವೇಗದಿಂದ ನಿಯಂತ್ರಣ ತಪ್ಪಿ ಕಾರು ಎರಡು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಅತಿಯಾದ ವೇಗವೇ ಘಟನೆಗೆ ಕಾರಣ ಇರಬಹುದೆಂದು ಅಂದಾಜಿಸಲಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲುಮಾಡಲಾಗಿದೆ.