ಕುಮಟಾ : ರವಿರಾಜ್ ಟ್ರೋಫಿಯು ಕಳೆದೊಂದು ವಾರದಿಂದ ನಡೆದು ನಿನ್ನೆ ಸಂಪನ್ನಗೊಂಡಿತು. ಟೂರ್ನಿಯ ಕೊನೆಯಲ್ಲಿ ವಿಶ್ವಜಿತ್ ನೇತೃತ್ವದ ರಾಜ್ Xl ಅಂಕೋಲಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ.

ಗೌಸ್ ನಾಯಕತ್ವದ ಹಳದಿಪುರ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಅಂಕೋಲಾ ತಂಡದ ಅರ್ಜುನ್ ಸರಣಿ ಶ್ರೇಷ್ಠ, ರಫಿಕ್ ಪಂದ್ಯ ಪುರುಷೋತ್ತಮ, ಹಾಗೂ ಹಳದಿಪುರದ ಗೌಸ್ ಬೆಸ್ಟ್ ಬ್ಯಾಟ್ಸಮೆನ್, ಬಾಷಾ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು.

RELATED ARTICLES  ನಡು ರಸ್ತೆಯಲ್ಲಿ ಕಾಣಿಸಿಕೊಂಡ ಮೊಸಳೆ..!

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ್ ಕೆ ಶೆಟ್ಟಿ ಹಾಗೂ ಗಣ್ಯರಾದ ದಿ.ಮೋಹನ ಶೆಟ್ಟಿಯವರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ರವಿಕುಮಾರ್ ಶೆಟ್ಟಿ, ಪ್ರದೀಪ್ ನಾಯಕ, ನಾಗರಾಜ್ ನಾಯಕ ತೊರ್ಕೆ, ಸುಬ್ರಾಯ ವಾಳ್ಕೆ ಇನ್ನೂ ಅನೇಕ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.

ಮಾಜಿ ಶಾಸಕ ದಿ ಮೋಹನ ಕೆ ಶೆಟ್ಟಿ ಹಾಗೂ ದಿ ರವಿರಾಜ ನಾಯಕ ಅವರ ಸ್ಮರಣಾರ್ಥ ರವಿರಾಜ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ 10ನೇ ವರ್ಷದ ರಾಜ್ಯ ಮಟ್ಟದ ಓಪನ್ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯು (ರವಿರಾಜ ಟ್ರೋಫಿ 2018) ಡಿಸೆಂಬರ್ 23ರಿಂದ 30 ವರೆಗೆ ನಡೆದ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಒಟ್ಟೂ 24 ತಂಡಗಳು ಭಾಗವಹಿಸಿದ್ದವು. ರವಿರಾಜ್ ಟ್ರೋಫಿ ಟೂರ್ನಿಯನ್ನು ಅತ್ಯಂತ ಯಶಸ್ವಿ ಟೂರ್ನಿಯಾಗಿ ಪರಿವರ್ತಿಸುವುದರಲ್ಲಿನ ಕೀರ್ತಿ ರಾಘು ನಾಯಕ ಹಾಗೂ ರವಿರಾಜ್ ಸ್ಪೋರ್ಟ್ಸ್ ಕ್ಲಬ್ ಗೆ ಸಲ್ಲುತ್ತದೆ.

RELATED ARTICLES  ಹೃದಯಾಘಾತ: ವೈದ್ಯಕೀಯ ವಿದ್ಯಾರ್ಥಿ ಸಾವು