ಅಂಕೋಲಾ: ಜಿಲ್ಲಾ ಪಂಚಾಯತ, ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರ ಕನ್ನಡ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರ ಕನ್ನಡ ಜಿಲ್ಲೆ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟ 2018-19 ನೇ ಸಾಲಿನ ದಿನಾಂಕ : 28-12-2018 ಮತ್ತು 29-12-2018 ರಂದು ಕ್ರೀಡಾಂಗಣ ಅಂಕೋಲಾದಲ್ಲಿ ನಡೆದ ಟೇಬಲ್ ಟೆನಿಸ್ ವಿಭಾಗದಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ 45 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಸುರೇಶ ಎನ್. ಗಾಂವಕರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸತತವಾಗಿ 25 ವರ್ಷಗಲಿಂದ ಸಿಂಗಲ್ಸ್ & ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ, ರಾಷ್ಟ್ರೀಯ ಕೂಟಕ್ಕೆ ಶ್ರೀ ಸುರೇಶ ಎನ್. ಗಾಂವಕರ ಶಿಕ್ಷಕರು ಹೆರವಟ್ಟಾ ಗ್ರಾಮದ ನಿವಾಸಿಯಾದ ಇವರಿಗೆ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ, ಊರಿನ ಗಣ್ಯರು, ನಾಗರಿಕರು, ಕೊಂಕಣ ಕ್ಲಬ್ ಕುಮಟಾ ಅಧ್ಯಕ್ಷರಾದ ಶ್ರೀ ಕಿರಣ ನಾಯಕ ಹಾಗೂ ಕ್ಲಬ್ ನ ಸದಸ್ಯರೆಲ್ಲರೂ ಅಭಿನಂದಿಸಿದ್ದಾರೆ.