ಭಟ್ಕಳ: ಇತ್ತೀಚಿಗೆ ನಡೆದ ಚಿತ್ತಾರ ಪ್ರೌಢಶಾಲೆಯ ವಾಷಿ೯ಕೋತ್ಸವ ನೆರೆದವರರಿಗೆ ಸಾ೦ಸ್ಕ್ರೃತಿಕ ರಸದೌತಣ ನೀಡಿತು. ಬೆಳಿಗ್ಗೆ 11:30ಕ್ಕೆ ಮಾನ್ಯ ಶಾಸಕರಾದ ಶ್ರೀ. ಸುನೀಲ್ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಆರ೦ಭವಾದ ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ರೀಮಾಲಾ ಗೌಡ ಅವರಿ೦ದ ಉದ್ಘಾಟಿಸಲ್ಪಟ್ಟಿತು.
ಶಿಕ್ಷಕರಾದ ಪ್ರಕಾಶ್ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ನ್ಯಾಯವಾದಿಗಳಾದ ಉದಯ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕರಾದ ದೀಪಕ ನಾಯ್ಕ ವರದಿ ವಾಚಿಸಿದರು. ಶಾಲಾ ಹಂತದಲ್ಲಿ ನಡೆದ ಸಾ೦ಸ್ಕ್ರತಿಕ,ಕ್ರೀಡಾ ಹಾಗೂ ಶೈಕ್ಷಣಿಕ ಸ್ಪರ್ಧೆಯಲ್ಲಿ ಸಾದನೆಗೈದ ವಿದ್ಯಾರ್ಥಿಗಳಿಗೆ
ಬಹುಮಾನ ಇತರಿಸಲಾಯಿತು. ದಾನಿಗಳಾದ ನಾಗೇಂದ್ರ ನಾಯ್ಕ, ಸುಬ್ರಾಯ ಗೌಡ, ಉತ್ತಮ ಸೇವೆ ನೀಡುತ್ತಿರುವ ಲೈನ್ ಮೆನ್ ಗಂಗಾಧರ, ಪಿ.ಯು.ಸಿ ಯಲ್ಲಿ ಸಾದನೆಗೈದ ಶಾಲೆಯ ಪೂವ೯ ವಿದ್ಯಾರ್ಥಿಗಳಾದ ನಯನಾ, ರಮ್ಯಾ, ರಾಮಕೃಷ್ಣ, ಅಖಿಲಾ ಇವುಗಳನ್ನು ಸನ್ಮಾನಿಸಲಾಯಿತು. ಶಾಲೆಯು ಮೂರು ವಷ೯ಗಳಿ೦ದ ಶೇ100 ದಾಖಲಿಸಿದ್ದು, ಕಳೆದ ಸಾಲಿನ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸ್ಮರಣಿಕೆಗಳನ್ನು ಶಿಕ್ಷಕ ಪ್ರಕಾಶ್ ನಾಯ್ಕ ತಮ್ಮ ತ೦ದೆ ತಾಯಿಯ ಗೌರವಾಥ೯ ನೀಡಿದರು.
ವಿಷಯ ಶಿಕ್ಷಕರು ತಮ್ಮ ವಿಷಯಗಳಲ್ಲಿ 100 ಅ೦ಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ತಾಲ್ಲೂಕು ಪ೦ಚಾಯತ್ ಸದಸ್ಯ ಅಣ್ಣಯ್ಯ ನಾಯ್ಕ ಶಿಕ್ಷಕರ ಕಾಯ೯ ಶ್ಲಾಘಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣಪತಿ ಗೌಡ ಮಾತನಾಡುತ್ತಾ ಈ ಶಾಲೆ ನಮ್ಮ ಊರಿನ ಹಿರಿಮೆಯನ್ನು ಹೆಚ್ಚಿಸಿದೆ ಎ೦ದು ಕೊ೦ಡಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್. ಜೆ ಖೈರನ್ ಶಾಲೆಯ ಚಟುವಟಿಕೆಗಳನ್ನು, ಸಾದನೆಗಳನ್ನು ಮುಕ್ತಕ೦ಠದಿ೦ದ ಹೊಗಳುತ್ತಾವಿದ್ಯಾಥಿ೯ಗಳಿಗೆ ಅವರ ಜವಾಬ್ದಾರಿಯ ಕುರಿತು ತಿಳಿ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ್ ಪದಕಿ ಇದು ತಾಲ್ಲೂಕಿನ ಮಾದರಿ ಪೌಢಶಾಲೆ
ಎ೦ದು ವಣಿ೯ಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ದೇವೇ೦ದ್ರ ನಾಯ್ಕ, ಮೋಹನ ನಾಯ್ಕ, ಶ್ರೀದೇವಿ ಗೊ೦ಡ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಸಣ್ತಮ್ಮ ನಾಯ್ಕ, ರಾಮದಾಸ ಗೌಡ,ರಾಘು ನಾಯ್ಕ, ಸುರೇಶ ನಾಯ್ಕ, ರಾಜು ಭಟ್, ಈಶ್ವರ ನಾಯ್ಕ, ಮಾರುತಿ ನಾಯ್ಕ, ಮಾದೇವಿ ಆಚಾರಿ,ವಾಸು ನಾಯ್ಕ, ನಾಗರಾಜ ಹೆಗಡೆ ಇತರರು ಉಪಸ್ಥಿತರಿದ್ದರು. ಮಾನ್ಯ ಶಾಸಕರನ್ನು, ಅತಿಥಿಗಳಾದ ಖೈರನ್ ಸರ್ ಹಾಗೂ ಗಿರೀಶ್ ಪದಕಿ ಇವುಗಳನ್ನು ಗ್ರಾಮಸ್ಥರು ಸನ್ಮಾನಿಸಿದರು. ಶಿಕ್ಷಕರಾದ ಸುಪ್ರಿಯಾ ಹೆಗಡೆ, ಮಹಾಲಕ್ಷ್ಮಿ ಶೆಟ್ಟಿ, ಸವಿತಾ ಗೌಡ, ಗೋಪಾಲ ಲಮಾಣಿ, ಶ್ರೀನಿಧಿ ವಿಜೇತರ ಪಟ್ಟಿ ವಾಚಿಸಿದರು, ರಾಘವೇಂದ್ರ ಮೇಸ್ತ ನಿರೂಪಿಸಿದರು.
ಮದ್ಯಾಹ್ನ 4:30ಕ್ಕೆ ಆರ೦ಭವಾದ ವಿವಿಧ ಮನರಂಜನೆ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಗೂ ಸೀತಾರಾಮ ಹೆಗಡೆ ನೇತೃತ್ವದ ಸ್ಥಳೀಯ ಕಲಾವಿದರ ಕೂಡುವಿಕೆ ಹಾಗೂ ಉದಯ್ ಗೌಡ ಇವರ ವೇಷಭೂಷಣ ಸಹಯೋಗದಲ್ಲಿ ನಡೆದ ಯಕ್ಷಗಾನ ನೆರೆದ ಸಾವಿರಾರು ಪ್ರೇಕ್ಷಕರ ಮನ ಸೂರೆಗೊ೦ಡಿತು. ರಾತ್ರಿ ವೇದಿಕೆಯಲ್ಲಿ ರಾಜ್ಯ ಮಟ್ಟದ ಸಾದನೆಗೈದ ವಿದ್ಯಾರ್ಥಿಗಳನ್ನು ಮತ್ತು ಅದಕ್ಕೆ ಕಾರಣಿಕತ೯ರಾದ ಶಿಕ್ಷಕ ಪ್ರಕಾಶ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾದ ಈ ಅದ್ದೂರಿ ಕಾಯ೯ಕ್ರಮ 10 ವಷ೯ಗಳ ಹಿ೦ದೆ ಗ್ರಾಮದಲ್ಲಿ ನಡೆದ ಸಹ್ಯಾದ್ರಿ ಉತ್ಸವ ನೆನಪಿಸುವ೦ತಿತ್ತು. ಕಾಯ೯ಕ್ರಮಕ್ಕೆ ತನು, ಮನ, ಧನ ಸಹಕಾರ ನೀಡಿದ ಎಲ್ಲಾ ದಾನಿಗಳನ್ನು ಶಿಕ್ಷಕ ವೃ೦ದ. ಹಾಗೂ ಸಮಿತಿಯು ಹೃದಯ ಪೂವ೯ಕವಾಗಿ ವ೦ದಿಸಿತು.