[ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಹಿರಿಯ ಅರ್ಚಕರಾದ ಗಣಪಯ್ಯ ಗುನಗ (ಸುಬ್ರಾಯ) ತಿಮ್ಮಪ್ಪ ಗುನಗರ ಶ್ರಾದ್ಧ ದಿನದ ನಿಮಿತ್ತ ಅವರ ಪುಣ್ಯ ನೆನಪು]
ಸಾಮಾನ್ಯವಾಗಿ ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬ ಮಾತು ಜನಜನಿತವಾಗಿದೆ. ಈ ಮಾತಿಗೆ ಅಪವಾದ ಕುಮಟಾ ಪಟ್ಟಣದ ದೇವರಹಕ್ಕಲಿನಲ್ಲಿರುವ ಪುರಾತನ ಪ್ರಸಿದ್ಧ ಗ್ರಾಮ ದೇವತೆ ಎಂದೇ ಬಿಂಬಿತವಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಹಿರಿಯ ಅರ್ಚಕ ಗಣಪಯ್ಯ ಗುನಗರು. ದೇವಾಲಯಕ್ಕೆ ಆಗಮಿಸುವ ಭಕ್ತರೊಡನೆ ತುಂಬಾ ಅನನ್ಯವಾಗಿ, ಆತ್ಮೀಯವಾಗಿ ಬೆರೆತು ಭಕ್ತರ ಕಷ್ಟ-ಕಾರ್ಪಣ್ಯಗಳಲ್ಲಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುವಲ್ಲಿ ನೇರವಾಗಿ ದೇವತೆಯೊಂದಿಗೆ ಸಂಭಾಷಿಸುವ ಪರಿ ಬಳಲಿ ಬಂದವರಿಗೆ ಸಂತೃಪ್ತ ಗೊಳಿಸುತ್ತಿತ್ತೆಂಬುದನ್ನು ಹಲವರು ಸದಾ ನೆನಪಿಸಿಕೊಳ್ಳುತ್ತಾರೆ.
ಬಾಲ್ಯದಿಂದಲೇ ಅರ್ಚಕವೃತ್ತಿಗೆ ತೊಡಗಿ ದೇವತಾರ್ಚನೆ, ಪೂಜೆ-ಪುನಸ್ಕಾರಗಳನ್ನು ಅತೀವ ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುವಲ್ಲಿ ಮುಂಚೂಣ ಯಲ್ಲಿದ್ದರು. ದೇವಾಲಯದ ಎಲ್ಲ ರಚನಾತ್ಮಕ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ದೇವಾಲಯದ ಪವಿತ್ರವಾದ ಬಂಡಿಹಬ್ಬದ ನೆನಪಾದರೆ ಗಣಪಯ್ಯ ಗುನಗರು ನೆನಪಾಗದೇ ಇರರು. ದೇವರ ಕಳಸವನ್ನು ಹಲವು ವರ್ಷಗಳ ಕಾಲ ಹೊತ್ತು ಅವಿಸ್ಮರಣ ೀಯ ಚೇತೋಹಾರಿ ಸೇವೆಗೈದಿದ್ದರು. ಅವರು ತಮ್ಮ ಇಳಿವಯಸ್ಸಿನಲ್ಲೂ ಸಾರ್ವಜನಿಕರೊಂದಿಗೆ, ದೇವೀ ಆರಾಧಕರಿಗೆ ತೋರುತ್ತಿರುವ ಪ್ರೀತಿ, ಆದರ, ವಾತ್ಸಲ್ಯ ಅನುಕರಣ ೀಯವಾದುದು ಎಂದು ದೇವಸ್ಥಾನದ ಮೊಕ್ತೇಸರರಾದ ಕೃಷ್ಣ ಬಾಬಾ ಪೈ ಅವರ ಅಭಿಮತ.
ಗುನಗರು ಮೊನ್ನೆ ಡಿ.20 ರಂದು ತಮ್ಮ 83 ನೇ ವಯಸ್ಸಿನಲ್ಲಿ ಸ್ವಗಸ್ಥರಾದರು. ಶ್ರೀ ದೇವಾಲಯದ ಅಪಾರ ಭಕ್ತವೃಂದದ ಪರವಾಗಿ ಮೃತರ ಆತ್ಮಕ್ಕೆ ಚಿರಶಾಂತಿ ಸದ್ಗತಿ ಆ ಭಗವಂತ ಕರುಣ ಸಲೀ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಾರ್ಥಿಸುತ್ತದೆ.