ಭಟ್ಕಳ : ಇಲ್ಲಿನ ನ್ಯೂ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ಮೂವತ್ತು ವರ್ಷಗಳ ಕಾಲ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಹಿನ್ನೆಲೆಯಲ್ಲಿ ಎಂ.ಎಚ್.ನಾಯ್ಕ ಅವರಿಗೆ ಸೇವಾ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ವೃಂದದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷ ಸುರೇಶ ನಾಯಕ ಅವರು ಎಂ.ಎಚ್. ನಾಯ್ಕ ಅವರ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿ ಮಾತನಾಡುತ್ತಾ ಮೂವತ್ತು ವರ್ಷಗಳ ಕಾಲ ನಮ್ಮ ಸಂಸ್ಥೆಯಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಂ.ಎಚ್. ನಾಯ್ಕ ಅವರಿಂದ ಶಿಕ್ಷಣ ಪಡೆದ ಅನೇಕ ವಿಧ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಬದುಕಿನಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇದು ನಾವೆಲ್ಲ ಹೆಮ್ಮೆ ಪಡುವ ಸಂಗತಿ ಎಂದರಲ್ಲದೇ ನಿವೃತ್ತಿಯ ನಂತರವೂ ಬಿಡುವಿನ ವೇಳೆಯಲ್ಲಿ ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಕಾರ್ಯವನ್ನು ಮುಂದುವರೆಸಬೇಕೆಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯಾಧ್ಯಾಪಕ ಎಂ.ಕೆ.ನಾಯ್ಕ ಮಾತನಾಡಿ ಸಂಸ್ಥೆಯ ಜವಾಬ್ಧಾರಿಯನ್ನು ನಿಭಾಯಿಸುವಲ್ಲಿ ಓರ್ವ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ,ಒಡನಾಡಿಯಾಗಿದ್ದ ಎಂ.ಎಚ್.ನಾಯ್ಕ ಅವರ ವೃತ್ತಿಯೆಡೆಗಿನ ಬದ್ಧತೆ ಶಿಸ್ತು ನಮಗೆಲ್ಲ ಮಾದರಿ ಎಂದು ನುಡಿದರು. ಶಾಲಾ ಶಿಕ್ಷಕರಾದ ಗಣಪತಿ ಶಿರೂರ, ರವಿರಾಜ ಚೌಕಿಮನೆ, ರಾಜಮ್ಮ ಹಿಚ್ಕಡ ಎಂ.ಎಚ್.ನಾಯ್ಕ ಅವರ ಉತ್ತಮ ವ್ಯಕ್ತಿತ್ವದ ಕುರಿತು ಹಾಗೂ ಅವರೊಂದಿಗಿನ ವೃತ್ತಿಜೀವನದ ಮರೆಯಲಾಗದ ಕ್ಷಣಗಳನ್ನು ಹಂಚಿಕೊಂಡು ಶುಭ ಹಾರೈಸಿದರು. ನಂತರ ಶಿಕ್ಷಕ ಎಂ.ಎಚ್. ನಾಯ್ಕ ಅವರಿಗೆ ಸಂಸ್ಥೆ ಹಾಗೂ ಶಾಲೆ, ಹಾಗೂ ವಿಧ್ಯಾರ್ಥಿಗಳ ವತಿಯಿಂದ ಸನ್ಮಾನಿಲಾಯಿತು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಪರವಾಗಿ ಉಪನ್ಯಾಸಕ ಗಂಗಾಧರ ನಾಯ್ಕ ,ಪಾಂಡುರಂಗ ನಾಯ್ಕ ಅವರು ಸನ್ಮಾನಿಸಿ ಗುರು ನಮನ ಸಲ್ಲಿಸಿದರು. ಸನ್ಮಾನ ಸ್ವೀಕರಸಿ ಮಾತನಾಡಿದ ಎಂ.ಎಚ್.ನಾಯ್ಕ ಮಾತನಾಡಿ ಮೂವತ್ತು ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ ಸಂಸ್ಥೆಗೆ ಮತ್ತು ಸೇವಾ ಅವದಿಯಲ್ಲ ಸಹಕರಿಸಿದ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಕೃತಜÐತೆ ಸಲ್ಲಿಸಿದರು. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಗಳಾಗುವಂತೆ ಕರೆನೀಡಿದರು. ಕಾರ್ಯಕ್ರಮವನ್ನು ಶಿಕ್ಷಕ ಪಾಂಡುರಂಗ ಅಳ್ವೆಗದ್ದೆ ನಿರೂಪಿಸಿದರೆ ಪರಮಯ್ಯ ಗೊಂಡ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು, ಶಿಕ್ಷಕ ಶಂಭು ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪಾ ಖಾರ್ವಿ ಹಾಗೂ ಶಿಕ್ಷಕರಾದ ಶರತ್ ಗುನಗಾ, ನಾರಾಯಣ ಗೊಂಡ, ಅವಧಾನಿ, ಕಚೇರಿಯ ಅಧೀಕ್ಷಕ ಗಣಪತಿ ನಾಯ್ಕ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.