ಭಟ್ಕಳ: ಭಟ್ಕಳ ಪತ್ರಕರ್ತರ ಸಂಘದಿಂದ ನೀಡಲ್ಪಡುವ ಜಿಲ್ಲಾಮಟ್ಟದ ೨೦೧೭ನೇ ಸಾಲಿನ ‘ಭಟ್ಟಾಕಳಂಕ’ ಪ್ರಶಸ್ತಿಗೆ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಪ್ರಬಂಧಕ ವಿಠ್ಠಲದಾಸ ಕಾಮತ್ ಹಾಗೂ ಪ್ರಜಾವಾಣಿ ಪತ್ರಿಕೆಯ ಭಟ್ಳಳದ ವರದಿಗಾರ ರಾಘವೇಂದ್ರ ಭಟ್ ಜಾಲಿ ಭಾಜನರಾಗಿದ್ದಾರೆ.
ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಯ ಕುರಿತು ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಕನ್ನಡದ ಪ್ರಥಮ ವ್ಯಾಕರಣಕಾರ,ಜೈನಮುನಿ,ಕವಿ,ಮಲ್ಲಿಗೆ ಕಂಪಿನ ನಾಡು ಭಟ್ಕಳಕ್ಕೆ ಈ ಹೆಸರು ಬರಲು ಕಾರಣೀಕರ್ತರಾದ ’ಭಟ್ಟಾಕಳಂಕ’ ಅವರ ಹೆಸರಿನಲ್ಲಿ ನಮ್ಮ ಪತ್ರಕರ್ತರ ಸಂಘದಿಂದ ೨೦೧೬ನೇ ಸಾಲಿನಿಂದ ಜಿಲ್ಲಾಮಟ್ಟದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪತ್ರಿಕಾಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಠ್ಠಲದಾಸ ಕಾಮತ್ ಹಾಗೂ ಕಳೆದ ೧೭ ವರ್ಷಗಳಿಂದ ಪ್ರಜಾವಾಣಿ ವರದಿಗಾರರಾಗಿ
ಕಾರ್ಯನಿರ್ವಹಿಸುತ್ತಿರುವ ರಾಘವೇಂದ್ರ ಭಟ್ ಜಾಲಿ ಇವರಿಗೆ ಈ ವರ್ಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ  ಎಂದರು.
ಜು.೨೯ರಂದು ಬೆಳಗ್ಗೆ ೧೦.೩೦ಕ್ಕೆ ಭಟ್ಕಳದ ಕಮಲಾವತಿ ರಾಮನಾಥ ಶಾನುಭಾಗ್ ಸಭಾಂಗಣದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ೫ಸಾವಿರ ರೂಪಾಯಿ ನಗದು ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನ ಸುದ್ದಿ ಟಿವಿ ಪ್ರಧಾನ ಸಂಪಾದಕ ಶಶಿಧರ ಭಟ್ ಉದ್ಘಾಟಿಸಲಿದ್ದು,ಶಾಸಕ ಮಂಕಾಳ ವೈದ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ  ಉಪವಿಭಾಗಾಧಿಕಾರಿ ಎಂ.ಎನ್ ಮಂಜುನಾಥ,ಡಿವೈ‌ಎಸ್‌ಪಿ ಶಿವಕುಮಾರ್.ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ,ಸಿದ್ದಾರ್ಥ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಯು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮುಂಗಾರು  ಕವಿಗೋಷ್ಠಿ ನಡೆಯಲಿದೆ ಎಂದು ಅಧ್ಯಕ್ಷ ವಿಷ್ಣು ದೇವಾಡಿಗ ತಿಳಿಸಿದರು.

RELATED ARTICLES  ಈಬಾರಿಯಾದರೂ ಉತ್ತರಕನ್ನಡ ಕರಾವಳಿಗೆ ಕೊಂಕಣಿ ಅಕಾಡಮಿಯ ಸಾರಥ್ಯದ ಕನಸು ನನಸಾದೀತೇ?

ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ,ಖಜಾಂಚಿ ಜಾವೇದ ಅಹಮ್ಮದ್,ಸದಸ್ಯರಾದ ಸುಭ್ಯಮಣ್ಯ ದಾಸನಕುಡಿಗೆ,ವಸಂತ ದೇವಾಡಿಗ,ಯಾಹ್ಯಾ ಹಲ್ಲಾರೆ,ಎನ್.ಡಿ ಶಾನುಭಾಗ್,ಶಂಕರ ನಾಯ್ಕ ಉಪಸ್ಥಿತರಿದ್ದರು