ಮೇಷ 
ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಂಸೆ ಸಲ್ಲಲಿದೆ. ಹಿರಿಯರಿಗೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ವಯಸ್ಕರಿಗೆ ಹೆಚ್ಚಿನ ಪರಿಶ್ರಮದಿಂದಲೇ ಕಂಕಣಬಲ ಒದಗಿ ಬರಲಿದೆ. ದಿನಾಂತ್ಯ ಶುಭವಿದೆ.

ವೃಷಭ 
ಅನಿರೀಕ್ಷಿತವಾಗಿ ರಿಪೇರಿಗಾಗಿ ಖರ್ಚುಗಳು ಅಧಿಕವಾದಾವು. ವಾಹನದಲ್ಲಿ ನಷ್ಟ ತೋರಿ ಬರಲಿದೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಪ್ರಾಪ್ತಿಯಾಗಲಿದೆ. ಮಕ್ಕಳ ಕೆಲಸಗಳಿಗಾಗಿ ಹೆಚ್ಚಿನ ಖರ್ಚು ಬರಲಿದೆ.

ಮಿಥುನ 

ಗೃಹ ನಿರ್ಮಾಣ ಕಾರ್ಯಗಳಿಗಾಗಿ ಖರ್ಚು ತೋರಿ ಬಂದೀತು. ಸಾಮಾಜಿಕ ರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ಸಲ್ಲಲಿದೆ. ನೌಕರ ವರ್ಗದವರಿಗೆ, ನಿರುದ್ಯೋಗಿಗಳಿಗೆ ಬದಲಾವಣೆ ತೋರಿ ಬರುವುದು.

ಕಟಕ 
ಆಗಾಗ ಕಾರ್ಯವಿಳಂಬದಿಂದಾಗಿ ಮನಸ್ಸಿಗೆ ಕಿರಿಕಿರಿಯೆನಿಸಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಜೋಡಣೆಯಾಗಲಿವೆ. ದಿನಾಂತ್ಯ ಶುಭ‌.

RELATED ARTICLES  ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ

ಸಿಂಹ 

ದೇವರ ಹರಕೆಗಳು ನೆರವೇರಲಿವೆ. ಬಂಧುವರ್ಗದಲ್ಲಿ ಶುಭಮಂಗಲ ಕಾರ್ಯ ನಡೆಯಲಿದೆ. ಆರೋಗ್ಯದಲ್ಲಿ ಆಗಾಗ ಏರುಪೇರುಗಳಿರುತ್ತದೆ. ವ್ಯವಹಾರ ಚೆನ್ನಾಗಿದ್ದರೂ ನೌಕರ ವರ್ಗದಿಂದ ಅಸಹಕಾರವಿದೆ.

ಕನ್ಯಾ 

ಅಧಿಕಾರಿಗಳ ತುಷ್ಟೀಕರಣಕ್ಕಾಗಿ ಧನವ್ಯಯ ವಾದೀತು. ಮಾನಸಿಕವಾಗಿ ಮಕ್ಕಳಿಂದ ಸಮಾಧಾನ ಸಿಗಲಾರದು. ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳು ಕಂಡು ಬರಲಿವೆ. ಹಿರಿಯರಿಗೆ ತೀರ್ಥಯಾತ್ರಾಯೋಗವಿದೆ.

ತುಲಾ 

ಎಗ್ಗಿಲ್ಲದ ಲಾಭಕ್ಕೆ ಸಂತಸದ ವಾತಾವರಣ. ಮಿತ್ರರ ಸಹಕಾರದಿಂದ ಉನ್ನತಿ ಸಾಧನೆಯಾಗಲಿದೆ. ಪ್ರವಾಸ, ಯಾತ್ರಾದಿಗಳಿಗಾಗಿ ವೆಚ್ಚ ಕಂಡು ಬರಲಿದೆ. ಆಗಾಗ ತೀರ್ಥಯಾತ್ರೆಯಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ವೃಶ್ಚಿಕ 
ನೆರೆಹೊರೆಯವರಿಂದ ಕಿರಿಕಿರಿ ತರು ತ್ತದೆ. ಹಿರಿಯರ ಆರೋಗ್ಯದ ಸಮಸ್ಯೆಗಾಗಿ ಆಸ್ಪತ್ರೆ ದರ್ಶನವಿದೆ. ಕಲಾವಿದರಿಗೆ ಆರ್ಥಿಕ ಮುಗ್ಗಟ್ಟು ತೋರಿ ಬರಲಿದೆ. ಧರ್ಮಕಾರ್ಯಗಳಿಗಾಗಿ ಮನಸ್ಸು ಚಿಂತಿಸಲಿದೆ. ಮುನ್ನಡೆಯಿರಿ.

RELATED ARTICLES  ಶ್ರೀಗಳನ್ನು ದೋಷಮುಕ್ತಗೊಳಿಸಿದ ತೀರ್ಪಿನಲ್ಲಿ, ಯಾವುದೇ ಅನೈತಿಕ ಸಂಬಂಧವಿತ್ತೆಂದು ಹೇಳುವ ವಿಚಾರಗಳಿಲ್ಲ - ನ್ಯಾಯಾಲಯ

ಧನು 

ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿರುತ್ತದೆ. ವಿದ್ಯಾರ್ಥಿಗಳ ಅಭ್ಯಾಸ ಉತ್ತಮ ರೀತಿಯಲ್ಲಿ ಮುಂದುವರಿಯಲಿದೆ. ಆದರೂ ಹೆಚ್ಚಿನ ಜಾಗ್ರತೆ ವಹಿಸಿರಿ. ಬ್ರಹ್ಮಚಾರಿಗಳಿಗೆ ಅನಿರೀಕ್ಷಿತವಾಗಿ ಕಂಕಣಬಲ ಕೂಡಿ ಬಂದೀತು.

ಮಕರ 
ಶತ್ರುಕಾಟ ದಮನವಾದೀತು. ರಾಜಕೀಯ   ದವರಿಗೆ ಅಡೆತಡೆಗಳಿಂದಲೆ ಕಾರ್ಯ ಸಾಧನೆ ಯಾಗಲಿದೆ. ಕಾಡು ಉತ್ಪತ್ತಿಯಲ್ಲಿ ಉತ್ತಮ ಲಾಭವಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವ್ಯಯವು ಉಂಟಾಲಿದೆ.

ಕುಂಭ 

ಆಗಾಗ ಸಂಚಾರ ಒದಗಿ ಬಂದು ಧನವ್ಯಯ ವಾದರೂ ಮನಸ್ಸಿಗೆ ಸಮಾಧಾನ ಸಿಗಲಿದೆ. ಅಲರ್ಜಿಯಂತಹ ಸಮಸ್ಯೆಗಳು ತೋರಿ ಬಂದಾವು. ಜಾಗ್ರತೆ ವಹಿಸಿರಿ. ಧರ್ಮಕಾರ್ಯಗಳಿಗಾಗಿ ಧನವ್ಯಯವಾದೀತು.

ಮೀನ 
ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ವಾರ್ತೆ ತಂದೀತು. ಅನಿರೀಕ್ಷಿತ ರೂಪದಲ್ಲಿ ಮಂಗಲಕಾರ್ಯಕ್ಕೆ ಪ್ರಸ್ತಾವ ತೋರಿ ಬಂದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ನಿಯಂತ್ರಣದಲ್ಲಿ ಇರಲಿ.