ಭಟ್ಕಳ : ಕಳೆದ ಕೆಲವು ದಿನಗಳಿಂದ ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕಾಗಿ ವಿಶೇಷ ಕಾಳಜಿ ವಹಿಸಬೇಕೆಂದು ಕೋರಿ ಸನ್ಮಾನ್ಯ ಕೇಂದ್ರ ಸಚಿವರೂ ಸಂಸದರೂ ಆದ ಅನಂತಕುಮಾರ ಹೆಗಡೆ ಅವರು ಕೇಂದ್ರ ರಕ್ಷಣಾ ಮಂತ್ರಿ, ನಿರ್ಮಲ ಸೀತಾರಾಮ್ ಅವರಿಗೆ ಶಾಸಕ ಸುನಿಲ್ ನಾಯ್ಕ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪಡೆಗೆ ಹೆಚ್ಚಿನ ಆದ್ಯತೆ ನೀಡಿ ಜರೂರಾಗಿ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿರುವ ಬೋಟ್ ಮತ್ತು ಮೀನುಗಾರ ಮಿತ್ರರ ಹುಡುಕಾಟಕ್ಕಾಗಿ ವಿಶೇಷ ಕಾಳಜಿ ವಹಿಸಬೇಕೆಂದು, ರಾಜ್ಯ ಗ್ರಹ ಸಚಿವರಾದ ಎಂ. ಬಿ.ಪಾಟಿಲ್ ಅವರನ್ನು ಕೋರಲಾಗಿದೆ.