ಕಾರವಾರ : ನಗರದ ಪೋಲಿಸ್ ವಸತಿಗೃಹ ಸಮೀಪದ ಕೊರೊನೆಟ್ ಎಂದ ಐಸ್ ಪ್ಲಾಂಟಿನಲ್ಲಿ ಅಮೋನಿಯಂ ನೈಟ್ರೇಟ್ ರಾಸಾಯನಿಕ ಸೋರಿಕೆಯಾಗಿದ್ದು ಸ್ಥಳೀಯರು ಉಸಿರಾಟದ ತೊಂದರೆ ಎದುರಿಸುವಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯ ಪ್ರಾರಂಭಿಸಿದ್ದಾರೆ.
“ಈ ನೀರು ಘನಿಕರಣ ಘಟಕದಲ್ಲಿ ಅಮೋನಿಯಂ ರಾಸಾಯನಿಕ ಪ್ರತಿನಿತ್ಯವೂ ಸೋರಿಕೆಯಾಗುತಿತ್ತು. ಈ ಬಗ್ಗೆ ಘಟಕದ ಮಾಲಿಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟುಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಲಿಲ್ಲ ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
“ಇಂದು ಮಧ್ಯಾಹ್ನ ಎರಡು ಘಂಟೆಗೆ ದೊಡ್ಡ ಪ್ರಮಾಣದಲ್ಲಿ ಅಮೋನಿಯಂ ಸೋರಿಕೆಯಾಗಿ ಗಿಡ ಮರಗಳು ಒಣಗಿ ಹೋಗಿದೆ. ಉಸಿರಾಟದ ತೊಂದರೆಯಿಂದ ನಾವು ಮನೆಬಿಟ್ಟು ದೂರ ಬಂದಿದ್ದೇವೆ. ಆದ್ದರಿಂದ ನಮಗೆ ಆದ ಹಾನಿಯನ್ನು ಕಂಪನಿಯವರು ಭರಿಸಬೇಕು ” ಎಂದು ಸ್ಥಳೀಯರು ಆಗ್ರಹಿಸಿದರು.