ಯಲ್ಲಾಪುರ: ಹಳವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಕೊರತೆಯ ಬಗ್ಗೆ ಮೂರು ದಿನಗಳಿಂದ ನಡೆಯುತ್ತಿದ್ದ ಶೂನ್ಯ ಹಾಜರಾತಿ ಪ್ರತಿಭಟನೆ ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆಯ ನಂತರ ಶುಕ್ರವಾರ ಮುಕ್ತಾಯಗೊಳಿಸಲಾಯಿತು.

ಶಿಕ್ಷಕರನ್ನು ನೇಮಕ ಮಾಡಿ ಕೊಡುವಂತೆ ಪಾಲಕರು ಮಾನ್ಯ ಜಿಲ್ಲಾಧಿಕಾರಿಯವರನ್ನು ಬೇಟಿ ಮಾಡಿ ಸಮಸ್ಯೆಯ ಕುರಿತು ಅರುಹಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಶಿಕ್ಷಣಧಿಕಾರಿಗಳ ಸೂಚನೆಯ ಮೇರೆಗೆ ಜು: 28 ರಂದು ಅಂಕೋಲಾ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ್ ಸ್ಥಳಕ್ಕೆ ಬೇಟಿ ನೀಡಿ ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೂ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವುದಾಗಿ ಆದೇಶವನ್ನು ಪ್ರಕಟಿಸಿದರು. ಇದರಿಂದಾಗಿ ಪಾಲಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು ಹಳವಳ್ಳಿಯ ಶಾಲೆಯ ಮಕ್ಕಳು ಮತ್ತೆ ಶಾಲೆಯೆಡೆಗೆ ಧಾವಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತೋರಿದ ಸಹಕಾರಕ್ಕೆ ಪಾಲಕವೃಂದ ಮತ್ತು ಶಾಲಾಭಿವೃಧ್ಧಿ ಸಮಿತಿಯು ಅಭಿನಂದನೆ ಸಲ್ಲಿಸಿದೆ.
ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ, ದಿನಕರ ಹೆಬ್ಬಾರ, ಆನಂದ ನಾಯ್ಕ, ಉಲ್ಲಾಸ ನಾಯ್ಕ, ಎನ್ ಆರ್ ಹೆಗಡೆ, ಶಶಾಂಕ್ ಹೆಗಡೆ , ಪ್ರಭಾಕರ ಹೆಗಡೆ, ದಾಮೋದರ ಹೆಬ್ಬಾರ, ಮತ್ತು ಊರ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES  ನಾಳೆ ಅಂಕೋಲಾದಲ್ಲಿ ಜಿಲ್ಲಾ ಕ.ಸಾ.ಪ.ದಿಂದ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ