ಕುಮಟಾ: ಗದಗದಲ್ಲಿ ರಾಜ್ಯ್ಲ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಆಂಗ್ಲ ಮಾಧ್ಯಮ ಹೈಸ್ಕೂಲ್, ತೋಂಟದಾರ್ಯ ಇಂಜಿನೀಯರ ಕಾಲೇಜ್ ಆವರಣದಲ್ಲಿ ನಡೆಯಿತು.
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳಾದ ಶಿವರಾಜ ಯೋಗೇಶ ನಾಯಕ ಮತ್ತು ದರ್ಶನ ಪಿ.ಅಂಬಿಗ ಇವರು ತ್ಯಾಜ್ಯ ನಿರ್ವಹಣೆ ಎಂಬ ಉಪವಿಷಯದಲ್ಲಿ ತಯಾರಿಸಿದ ಮಾದರಿ “ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಟರ್‍ಲಾಕ್ ತಯಾರಿಕೆ” ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಇಂದಿನ ದಿನಮಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ನಾಶವಾಗುತ್ತಿದೆ. ಪ್ರಾಣ -ಪಕ್ಷಿಗಳು ಪ್ಲಾಸ್ಟಿಕ್ ತ್ಯಾಜ್ಯ ತಿಂದು ಸಾವನ್ನಪ್ಪುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿ ಮುಂದೆ ಸಮಾಜಕ್ಕೆ ಉಪಯೋಗವಾಗಿ ತ್ಯಾಜ್ಯದಿಂದ ಪರಿಸರ ಉಳಿಸಬಹುದಾಗಿದೆ.
ಈ ಹಿಂದೆಯೂ ಅನೇಕ ಸಲ ಹೈಸ್ಕೂಲಿನ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡ ಇವರ ಮಾರ್ಗದರ್ಶನ ಹಾಗೂ ಪರಿಶ್ರಮದಿಂದ ಮಕ್ಕಳ ವಿಜ್ಞಾನ ಸಮಾವೇಶ, ಪರಿಸರ ಮಿತ್ರ ಶಾಲಾ ಪ್ರಶಸ್ತಿ, ಇನ್‍ಸ್ಪಾಯರ್ಡ್ ಅವಾರ್ಡ, ಶಿಕ್ಷಕರ ಪಠ್ಯೇತರ ಚಟುವಟಿಕೆ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ. ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರ ಸಹಕಾರದಿಂದ ಹೈಸ್ಕೂಲಿನ ಕೀರ್ತಿ ಇನ್ನಷ್ಟು ಹೆಚ್ಚಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಕಾರ್ಯದರ್ಶಿ ಮೋಹನ ಕೆರೆಮನೆ, ಸದಸ್ಯರು, ಮುಖ್ಯೋಪಾಧ್ಯಾಯರಾದ ರೋಹಿದಾಸ ಗಾಂವಕರ, ಶಿಕ್ಷಕ ವೃಂದದವರು, ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ, ಗ್ರಾಮ ಪಂಚಾಯತ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀಲಕಂಠ ನಾಯಕ, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರು, ಸ್ಪಂದನ ಫೌಂಡೇಶನ್‍ನ ಎನ್. ರಾಮು ಹೀರೆಗುತ್ತಿ, ಮಹಾಲಸಾ ಸಿದ್ದಿವಿನಾಯಕ ಟೆಂಪಲ್ ಧರ್ಮದರ್ಶಿಗಳಾದ ಸುನೀಲ ಪೈ. ಮಾದನಗೇರಿ. ಆರ್.ಎಫ್.ಓ. ಮೋಹನ ಬಿದರಿ ಹಿರೆಗುತ್ತಿ,ಊರನಾಗರಿಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಉಪನಿರ್ದೇಶಕರಾದ ಎನ್.ಜಿ.ನಾಯಕ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ ಪ್ರಾಚಾರ್ಯರಾದ ಈಶ್ವರ ನಾಯ್ಕ. ಕೇತ್ರ ಶಿಕ್ಷಣಾಧಿಕಾರಿಗಳಾದ ಎ.ಬಿ.ಮುಲ್ಲಾ ಇವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭಹಾರೈಸಿದರು.