ಶಿರಸಿ : ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ, ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ವ್ಯಾವಹಾರಿಕ ಸೇವೆಗಳ ವಿಸ್ತರಣೆಯನ್ನು ಮಾಡಿಕೊಂಡು ಬಂದಿರುವ ಸಹಕಾರಿ ದಿಗ್ಗಜ ಸಂಸ್ಥೆ “ಟಿ.ಎಸ್.ಎಸ್” ನಲ್ಲಿ ಜನವರಿ 04, 05 ಮತ್ತು 06 ರಂದು ಫರ್ನಿಚರ್ ಮೇಳವನ್ನು ಆಯೋಜಿಸಲಾಗಿದೆ. ರವಿವಾರದವರೆಗೆ ನಡೆಯುವ ಈ ಫರ್ನಿಚರ್‍ಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಾಂತಾರಾಮ ಹೆಗಡೆ ಶೀಗೇಹಳ್ಳಿ ನೆರವೇರಿಸಿದರು.
ಸಂಸ್ಥೆಯ ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೀಲಕಮಲ ಕಂಪನಿಯ ವಿವಿಧ ಫರ್ನಿಚರಗಳು ವಿಶೇಷ ರಿಯಾಯತಿಯೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದ್ದು, ಮರ, ಪ್ಲಾಸ್ಟಿಕ್ ಮತ್ತು ಕಬ್ಬಿಣದಲ್ಲಿ ಸುಂದರವಾಗಿ ರೂಪಿಸಿದ ಡೈನಿಂಗ್ ಟೇಬಲ್, ಸೋಫಾ, ಚೇರ್, ಕಾಟ್‍ಗಳು, ಅಲ್ಮೆರಾ, ಟಿ.ವಿ. ಸ್ಟ್ಯಾಂಡ್, ಕಂಪ್ಯೂಟರ್ ಟೇಬಲ್ ಹೀಗೆ ಅನೇಕ ಉತ್ಪನ್ನಗಳು, ಬೆತ್ತದ ಖುರ್ಚಿ, ಜೂಲಾಗಳು ಮನೆಯ ಅಂದವನ್ನು ಹೆಚ್ಚಿಸಲು ಸಹಕರಿಸಲಿದೆ.
ಇದೇ ಸಂದರ್ಭದಲ್ಲಿ ಅಮೇರಿಕನ್ ಟೂರಿಷ್ಟರ್ ಕಂಪನಿಯ ವಿವಿಧ ನಮೂನೆಯ ಬ್ಯಾಗ್‍ಗಳು ಸಹ ಶೇ.35-65ರ ವರೆಗಿನ ರಿಯಾಯತಿಯಲ್ಲಿ ಮಾರಾಟ ಮೇಳದಲ್ಲಿ ಇದ್ದು, ಗ್ರಾಹಕರ ಖರೀದಿಗೆ ಅನುಕೂಲಕರವಾಗಲಿದೆ.
ಈ ಮಾರಾಟ ಮೇಳದ ಪ್ರಯೋಜನವನ್ನು ಹೆಚ್ಚಿನ ರೀತಿಯಲ್ಲಿ ಪಡೆಯಲು ಕೋರಲಾಗಿದೆ.