ಸೀತಾಂಗೋಳಿ: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಗೋವಿಗಾಗಿ ಮೇವು-ಮೇವಿಗಾಗಿ ನಾವು’ ಯೋಜನೆಯ ಅಂಗವಾಗಿ ಭಾನುವಾರ ಸೀತಾಂಗೋಳಿ ಮುಖಾರಿಕಂಡದಲ್ಲಿ ನಡೆದ ದ್ವಿತೀಯ ಹಂತದ ಸೇವಾ ಅರ್ಘ್ಯವು ಯಶಸ್ವಿಯಾಗಿ ಜರಗಿತು.


ಊರಿನ ಕೃಷಿಕ ಕೃಷ್ಣ ಮಣಿಯಾಣಿ ಮುಖಾರಿಗದ್ದೆಯವರು ಧ್ವಜಾರೋಹಣ ನಡೆಸಿದರು. ಗುರಿಕ್ಕಾರ ಕಾವೇರಿಕಾನ ಶಂಕರಭಟ್ಟರು ಫಲಸಮರ್ಪಣೆ ಮಾಡಿದರು.

ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ನೇತೃತ್ವವಹಿಸಿದರು. ಮಹಾ ಮಂಡಲ ಅಧ್ಯಕ್ಷೆ ಈಶ್ವರಿಶ್ಯಾಮ ಭಟ್ ಬೇರ್ಕಡವು, ಶ್ಯಾಮ ಭಟ್ ಬೇರ್ಕಡವು, ಶ್ರೀಕೃಷ್ಣ ಭಟ್ ಮೀನಗದ್ದೆ ಇವರು ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸೇವಾ ಅರ್ಘ್ಯದಲ್ಲಿ ಭಾಗವಹಿಸಿದರು.
ಮುಳ್ಳೇರ್ಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮಂಡಲ ಪದಾಧಿಕಾರಿಗಳಾದ ಕುಸುಮಾ ಪೆರ್ಮುಖ, ಡಾ.ಡಿ.ಪಿ.ಭಟ್, ಸತ್ಯ ಶಂಕರ ಭಟ್ಟ ಹಿಳ್ಳೆಮನೆ ಉಪಸ್ಥಿತರಿದ್ದರು. ವಲಯ ಪದಾಧಿಕಾರಿಗಳಾದ ಬಾಲಕೃಷ್ಣ ಶರ್ಮ, ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ , ಸೂರ್ಯನಾರಾಯಣ ಭಟ್, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ರಮೇಶ ಭಟ್ ಏತಡ್ಕ, ಕನಕವಲ್ಲಿ ಬಡಗಮೂಲೆ, ಡಾ.ಮಾಲತಿಪ್ರಕಾಶ, ವಿವಿಧ ವಲಯ ಗುರಿಕ್ಕಾರರು, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮಾತೆಯರು ಶ್ರಮದಾನದಲ್ಲಿ ಸಾನಿಧ್ಯವಹಿಸಿದರು.

RELATED ARTICLES  ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರ : ಸುಮಾರು 222 ಕ್ಕೂ ಹೆಚ್ಚು ಮಂದಿ ಸಾವು.

ಬಜಕೂಡ್ಲು ಅಮೃತಧಾರಾ ಗೋಶಾಲೆಯ ಪದಾಧಿಕಾರಿಗಳಾದ ಶ್ರೀಧರ ಭಟ್, ದೇವಲೋಕ ನಿರಂಜನ, ಕೃಷ್ಣ ಪ್ರಸಾದ್ ಬನಾರಿ ಇವರು ಸಹಾಯ ಸಹಕಾರನಗನ್ನಿತ್ತರು.
ಕೇಶವಪ್ರಸಾದ ಎಡಕ್ಕಾನ ಕಾರ್ಯಕ್ರಮ ಸಂಯೋಜನೆ ಮಾಡಿದರು. ಉಲ್ಲೆಖ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ ಸಾಂದರ್ಭಿಕ ಸಹಾಯ ಮಾಡಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಮಾಜದ ಹಿರಿಯ ಮುಖಂಡರಾದ ಶಾಮ ಭಟ್ ಕೋಣಮ್ಮೆ , ಶ್ರೀ ರಾಮಾಶ್ರಮ ಗಿರಿನಗರದ ಕಾರ್ಯಕರ್ತರಾದ ಗಣಪತಿ ಶಾಸ್ತ್ರಿ ಇವರು ಆಗಮಿಸಿ ಕಾರ್ಯಚಟುವಟಿಕೆಯ ಬಗ್ಗೆ ಶ್ಲಾಘಿಸಿ ಸಂಘಟನೆಯ ಸಮರ್ಥವಾದ ಸಂಯೋಜನೆ ಮತ್ತು ಬೆಳವಣಿಗೆಗೆ ಇಂತಹ ಕಾರ್ಯ ಸಮಯೋಚಿತವೂ ಅನಿವಾರ್ಯವೂ ಆಗಿದೆ ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

RELATED ARTICLES  ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ಭತ್ಯೆ ಸೇರಿಸಿ ಶೇಕಡಾ 30ರಷ್ಟು ವೇತನ ಹೆಚ್ಚಳ, ಜುಲೈ 1, 2017ರಿಂದ ಪೂರ್ವಾನ್ವಯ.

ಪೆರ್ಲದ ಸಜೀವನ್, ಪೆರಡಾಲ ವಲಯದ ಕಾರ್ಯದರ್ಶಿ ಹರಿಪ್ರಸಾದ ಪೆರ್ಮುಖ, ಶಿವರಾಮ ದೊಡ್ಡಮಾಣಿ, ಶಂಭಟ್ಟ ಕುದ್ರೆಪಾಡಿ ಇವರು ಮುಳಿಹುಲ್ಲು ಕತ್ತರಿಸುವ ಯಂತ್ರಗಳನ್ನು ಒದಗಿಸಿದರು.
ಮಾತೃ ವಿಭಾಗದ ಸಹಕಾರದೊಂದಿಗೆ ಬಾಯಾರಿಕೆ, ಉಪಹಾರದ ವ್ಯವಸ್ಥೆ, ಕೋಡಿಮೂಲೆ ಕೃಷ್ಣಭಟ್ಟರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು. ಅಂದಾಜು 400ಕಟ್ಟ ಮುಳಿಹುಲ್ಲನ್ನು ಪೆರ್ಲದ ಅಮೃತಧಾರಾ ಗೋಶಾಲೆಗೆ ಸಾಗಿಸಲಾಯಿತು.

ಚಿತ್ರ ವರದಿ : ಗೊವಿ೦ದ ಬಳ್ಳಮೂಲೆ

➖➖➖➖➖➖➖➖?