ಮೇಷ:- ನಿಮಗೆ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಆಸಕ್ತಿ. ಅಂತೆಯೆ ಈ ದಿನದ ರಾಜಕೀಯ ವಿದ್ಯಮಾನಗಳು ನಿಮಗೆ ಸಹಾಯ ಮಾಡುವವು. ಜನರು ನಿಮ್ಮನ್ನು ಗುರುತಿಸಿ ಆರಾಧಿಸುವರು. ಹಣ ನೀರಿನಂತೆ ಖರ್ಚಾಗುವುದು. 

ವೃಷಭ:- ಹೆಚ್ಚಿನ ಲವಲವಿಕೆ ಹಾಗೂ ಮುತುವರ್ಜಿ ಪ್ರದರ್ಶಿಸಿ ಕಾರ್ಯ ಸಾಫಲ್ಯತೆ ಹೊಂದುವಿರಿ. ಮಕ್ಕಳು ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಕೊಡುವುದರಿಂದ ಆಂತರಿಕವಾಗಿ ಹೆಚ್ಚು ಆನಂದಿತರಾಗುವಿರಿ. ಆರೋಗ್ಯದ ಕಡೆ ಗಮನ ಹರಿಸಿ. 


ಮಿಥುನ:- ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವರನ್ನು ಆರಾಧನೆ ಮಾಡಿ. ಇದರಿಂದ ನೆಮ್ಮದಿ ಕಾಣುವಿರಿ. 


ಕಟಕ:- ಕೃಷಿಕರಿಗೆ ಭೂಮಿಯ ಸೃಜನಾತ್ಮಕ ಕಾರ್ಯ ಯೋಜನೆಗಳಲ್ಲಿ ಇತರೆ ರೈತರ ಬೆಂಬಲ ದೊರೆಯುವುದು. ಕೆಲವರು ಜಮೀನು, ಆಸ್ತಿ ಖರೀದಿಸಲು ಮುಂದಾಗುವರು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವರು. 

RELATED ARTICLES  ವಿನೂತನ ಪುಣ್ಯಪರ್ವ "ಗಾಯತ್ರಿ ಮಹೋತ್ಸವ"

ಸಿಂಹ:- ಬರೀ ಬೊಗಳೆ ಮಾತಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಸ್ವಾರ್ಥ ಜೀವನ ಎಂದೂ ಉನ್ನತಮಟ್ಟಕ್ಕೆ ಏರುವುದಿಲ್ಲ. ಹೃದಯ ವೈಶಾಲ್ಯತೆಯನ್ನು ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯಹಸ್ತ ನೀಡಿ. 

ಕನ್ಯಾ:- ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಮೇಲೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠ ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ. 

ತುಲಾ:- ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟಂತೆ ಉತ್ತಮ ಸಂವಹನಶೀಲರಾದ ನೀವು ಪ್ರಮುಖ ಕಾರ್ಯಾಗಾರದಲ್ಲಿ ಕೇಂದ್ರಬಿಂದುವಾಗುವಿರಿ. ನಿಮ್ಮ ಮಾತುಕತೆ ಮತ್ತು ವಿಚಾರ ಲಹರಿಯ ಪ್ರಭಾವದಿಂದ ಜನರು ನಿಮ್ಮತ್ತ ಆಕರ್ಷಿತರಾಗುವರು. 

ವೃಶ್ಚಿಕ:- ಮಕ್ಕಳು ಜೀವನಾನುಭವದ ಕೊರತೆಯಿಂದ ಕೆಲ ತಪ್ಪುಗಳನ್ನು ಮಾಡುವರು. ಹಾಗಂತ ಅವರ ಮೇಲೆ ಹೆಚ್ಚು ಕೋಪಗೊಳ್ಳದೆ ಶಾಂತ ರೀತಿಯಿಂದ ಅವರನ್ನು ತಿದ್ದಲು ಪ್ರಯತ್ನಿಸಿ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವರು. 

RELATED ARTICLES  ಉತ್ತಮ ಭವಿಷ್ಯಕ್ಕೆ ಇತಿಹಾಸದ ಅರಿವು ಅಗತ್ಯ : ವಿದ್ವಾನ್ ಜಗದೀಶ ಶರ್ಮಾ

ಧನುಸ್ಸು:- ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು. 

ಮಕರ:- ಮನಸ್ಸನ್ನು ಗೊಂದಲಕ್ಕೆ ಈಡು ಮಾಡುವಂತಹ ಅಸಹಜ ಪ್ರೇಮ ಪ್ರಕರಣಗಳಿಂದ ದೂರ ಇರುವುದು ಒಳ್ಳೆಯದು. ಸದ್ಯಕ್ಕೆ ಗ್ರಹಬಲ ಇಲ್ಲದೆ ಇರುವುದರಿಂದ ಮನೆಯ ಹಿರಿಯರಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುವ ಸಂಭವ ಇದೆ. 

ಕುಂಭ:- ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ. 

ಮೀನ:- ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.