ಕುಮಟಾ: ಇಲ್ಲಿಯ ಕೆನರಾ ಎಜುಕೇಶನ್ ಸೊಸೈಟಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು ದಿ. 8 ರಂದು ಸಾಂಯಕಾಲ 4.30 ಗಂಟೆಗೆ ಶಾಲಾ ರಂಗಮಂದಿರದಲ್ಲಿ ನಡೆಯಲಿದ್ದು, ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ರತ್ನಾಕರ ನಾಯ್ಕ ಉದ್ಘಾಟಿಸಲಿದ್ದಾರೆ.
ಅತಿ ವಂದನೀಯ ಧರ್ಮ ಗುರುಗಳಾದ ಫಾ||ಜೊನ್ ವರ್ತ್‍ರ ಗೌರವ ಉಪಸ್ಥಿತಿಯಲ್ಲಿ ಶಾಲಾ ಹಸ್ತ ಪತ್ರಿಕೆ ಅಮರ ಜ್ಯೋತಿ ಬಿಡುಗಡೆಯಾಗಲಿದೆ. ಕೆ.ಇ.ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ರಾಜೇಶ ಪೈ ಹಾಗೂ ನಿಲೇಶ ಎಂಟರ್ ಪ್ರೈಸಸ್‍ನ ಮಾಲಕ ಯುವ ಉದ್ಯಮಿ ಚಂದ್ರಶೇಖರ ಪಟಗಾರ ಹಿರೇಗುತ್ತಿ ಆಗಮಿಸಲಿದ್ದಾರೆ.
ಇದಕ್ಕೂ ಮೊದಲು ಪೂರ್ವಾಹ್ನ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಯಮಿ ಮೋಹನ ಶಾನಭಾಗ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆ.ಇ.ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ವಹಿಸಲಿದ್ದಾರೆ. ಅತಿಥಿಗಳಾಗಿ ಡಾ.ರವಿರಾಜ ಕಡ್ಲೆ, ಗ್ರಾ.ಪಂ.ಸದಸ್ಯೆ ಭಾರತಿ ಶಿವಾನಂದ ಗುಡೇಅಂಗಡಿ, ಪಾಲಕ ಪ್ರತಿನಿಧಿಗಳಾಗಿ ವೆಂಕಟೇಶ ಪೈ ಮತು ಗಿರಿಜಾ ಗೌಡ ಆಗಮಿಸಲಿದ್ದಾರೆ ಮತ್ತು ಮೊದಲ ದಿನ ನಡೆಯುವ ಮಕ್ಕಳ ಸಂತೆ ಉದ್ಘಾಟಿಸಲು ಪುರಸಭಾ ಸದಸ್ಯರಾದ ಸುಮತಿ ಭಟ್ಟ ಆಗಮಿಸಲಿದ್ದಾರೆಂದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ತಿಳಿಸಿದ್ದಾರೆ.