ಕಾರವಾರ: ಮುಂದಿನ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ನೇತೃತ್ವದಲ್ಲಿ ಶುಕ್ರವಾರ ಧಾರವಾಡ ಸಮ್ಮೇಳನಕ್ಕೆ ಆಗಮಿಸಿದ ಜಿಲ್ಲೆಯ ಬರಹಗಾರರು ಹಾಗೂ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಆಗ್ರಹಿಸಿದರು.

ಸಮ್ಮೇಳನ ನಡೆವ ಹೊರ ಆವರಣದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಉತ್ತರ ಕನ್ನಡಕ್ಕೆ ಆತಿಥ್ಯ ನೀಡಬೇಕೆಂದು ಘೋಷಣೆ ಕೂಗಿದರಲ್ಲದೇ ರಾಜ್ಯಾಧ್ಯಕ್ಷರಿಗೆ ಹಾಗೂ ಕಸಾಪ ರಾಜ್ಯ ಕಾರ್ಯಕಾರಿ ಸಮಿತಿ ಸದ್ಯರಿಗೆ ಮನವಿ ಅರ್ಪಿಸಿದ ಅರವಿಂದ ಕರ್ಕಿಕೋಡಿಯವರು ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಸಮ್ಮೇಳನ ನಡೆಸುವ ಅವಕಾಶ ಕೋರುತ್ತಿದ್ದು, ಈ ಸಲವಾದರೂ ಸಮ್ಮೇಳನ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

RELATED ARTICLES  ಕೆಕ್ಕಾರ ಸೋನಾರಕೇರಿ ಗೌಡರಕೊಪ್ಪ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಮೋಹನ ಶೆಟ್ಟಿ.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ, ಕೋಶಾಧ್ಯಕ್ಷ ಉಮೇಶ್ ಮುಂಡಳ್ಳಿ, ತಾಲೂಕಾ ಘಟಕದ ಅಧ್ಯಕ್ಷರಾದ ನಾಗರಾಜ ಹರಪನಹಳ್ಳಿ ಕಾರವಾರ. ವೇಣುಗೋಪಾಲ ಮುದ್ಗುಣಿ ಯಲ್ಲಾಪುರ, ಡಾ.ಶ್ರೀಧರ ಉಪ್ಪಿನಗಣಪತಿ ಕುಮಟಾ,ನಾಗೇಶ್ ಪಾಲನಕರ, ಮುಂಡಗೋಡ, ಶಾರದಾ ಭಟ್, ನಜೀರ್ ಅಹಮ್ಮದ್ ಯು. ಶೇಖ್, ಭಾರತಿ ಮೂಡಭಟ್ಕಳ, ಸುಧಾರಾಣಿ ನಾಯ್ಕ, ಶೋಭಾ ನಾಯ್ಕ ಹಿರೇಕೈ, ಸುಭಾಷ್ ಡೋರಿ, ದಯಾನಂದ ನಾಯ್ಕ, ತಿಪ್ಪಣ್ಣ ಗುರಗಿ, ನೂತನ ನಾಯ್ಕ, ಎಂ.ಎಸ್.ಹೆಗಡೆ, ಗೋಪಾಲ ನಾಯ್ಕ ಭಾಶಿ, ಚಿದಾನಂದ ಭಂಡಾರಿ , ವೆಂಕಟರಮಣ ಮಡಿವಾಳ, ಪ್ರಶಾಂತ ಹೆಗಡೆ , ಪ್ರಕಾಶ್ ಬಿ.ಜಿ. ತಮ್ಮಣ್ಣ ಬೀಗಾರ , ವಿಠ್ಠಲ ಅವರಗೊಪ್ಪ, ಶಿವಲೀಲಾ ಹುಣಸಗಿ, ಫೈರೋಜಾ ಬೇಗಂ ಶೇಖ್, ವಿನಯ ಪಾಲನಕರ ಮುಂತಾದವರು ಇದ್ದರು.

RELATED ARTICLES  Metro city's should make road with protection In mind