ಕುಮಟಾ : “ಪ್ರೌಢಶಾಲಾ ಹಂತದಲ್ಲಿಯ ವಿದ್ಯಾರ್ಥಿಗಳು ಹದಿಹರೆಯದಲ್ಲಿ ಬರುತ್ತಿದ್ದು ನಕರಾತ್ಮಕ ಪ್ರಭಾವಗಳಿಗೆ ಒಳಗಾಗುವ ಸಾದ್ಯತೆ ಇರುತ್ತದೆ.ಇದನ್ನು ಸರಿಯಾಗಿ ಗುರುತಿಸಿ ಹದಿಹರೆಯವನ್ನು ಸರಿಯಾಗಿ ನಿರ್ವಹಿಸವ ಕೌಶಲ್ಯವನ್ನು ವಿದ್ಯಾರ್ಥಿಗಳು ರೂಡಿಸಿಕೊಂಡರೆ ತಮ್ಮ ಜೀವನದ ಗುರಿ ತಲಪಲು ಸಾದ್ಯ” ಎಂದು ಕುಮಟಾ ತಾಲೂಕಾ ಆಸ್ಪತ್ರೆಯ ಆಪ್ತಸಮಾಲೋಚಕ ಪ್ರದೀಪ್ ನಾಯ್ಕ ಹೇಳಿದ್ದರು. ಅವರು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಾಡುಮಾಸ್ಕೇರಿಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆದ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಹದಿಹರೆಯದಲ್ಲಿ ಆಗುವ ದೈಹಿಕ,ಮಾನಸಿಕ,ಭಾವನಾತ್ಮಕ ಬದಲಾವಣೆಗಳ ಬಗ್ಗೆ,ಅತಿಯಾದ ಮೊಬೈಲ್ ಬಳಕೆಯ ದುಸ್ಪರಿಣಾಮಗಳ ಬಗ್ಗೆ, ವಿವರವಾದ ಮಾಹಿತಿಯನ್ನು ವಿವಿಧ ಕಥೆ, ಘಟನೆಗಳು, ಮತ್ತು ಚಟುವಟಿಕೆಗಳ ಮೂಲಕ ಸರಳವಾಗಿ ಹೇಳಿದ್ದರು. ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ತರಭೇತಿ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಶಾಲಾ ಮುಖ್ಯಾಧ್ಯಾಪಕಿಯಾದ ಪದ್ಮಾ ನಾಯಕ “ ವಿದ್ಯಾರ್ಥಿಗಳು ಇಂತಹ ಕಾರ್ಯಗಾರದ ಸದುಪಯೋಗ ಪಡೆದುಕೊಂಡು ಓದಿನಲ್ಲಿ ಯಶಸ್ಸು ಸಾಧಿಸಲಿ” ಎಂದು ಶುಭ ಹಾರೈಸಿದ್ದರು. ವಿಜ್ಞಾನ ಶಿಕ್ಷಕಿ ಶ್ಯಾಮಲಾ ನಾಯಕ ಕಾರ್ಯಕ್ರಮ ನಿರೂಪಿಸಿದ್ದರು. ಶಿಕ್ಷಕರಾದ ಶ್ರೀದರ ನಾಯಕ, ಕಾರ್ಯಕ್ರಮದಲ್ಲಿದ್ದು ಸಹಕರಿಸಿದ್ದರು.ಇದೇ ರೀತಿಯ ಕಾರ್ಯಗಾರವನ್ನು ಶ್ರೀ ಸದ್ಗರು ನಿತ್ಯಾನಂದ ಪ್ರೌಢಶಾಲೆ ಸಾಣಿಕಟ್ಟಾದಲ್ಲಿಯೂ ನಡೆಸಲಾಯಿತು.

RELATED ARTICLES  ಹೊನ್ನಾವರದ ಹಲವೆಡೆ ವರುಣನ ಆರ್ಭಟ