ಮೇಷ:- ಬೇರೆಯವರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ. ಗುರುವಿನ ಬಲವಿದೆ ಎಂದು ಕೈಲಾಗದ ಕೆಲಸಗಳನ್ನು ಹಮ್ಮಿಕೊಳ್ಳುವುದೂ ಒಳ್ಳೆಯದಲ್ಲ. ಆ ಕಾರ್ಯವನ್ನು ಜಾಣ್ಮೆಯಿಂದ ಮುಂದೆ ಹಾಕಿ.
ವೃಷಭ:- ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ಮಂದ ಪ್ರಗತಿ ಕಂಡುಬರುವುದು. ಹಾಗಂತ ಈ ವಿಚಾರದಲ್ಲಿ ಅವಸರ ತೋರಿ ಬೇರೆ ದಾರಿ ಹುಡುಕಲು ಹೊರಟರೆ ತೊಂದರೆ ಎದುರಾಗುವುದು. ಸಂಗಾತಿಯ ವಿಚಾರಧಾರೆಗಳಿಗೆ ಬೆಂಬಲ ಸೂಚಿಸಿ.
ಮಿಥುನ:- ಪರಿವರ್ತನೆ ಜಗದ ನಿಯಮ. ಅಂತೆಯೇ ಸದ್ಯದ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸ್ವೀಕರಿಸುವುದರಿಂದ ಮುಂದೆ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಕಟಕ:- ನಿಮ್ಮ ಆಚಾರ, ವಿಚಾರಗಳೇ ಭಿನ್ನತೆಯಿಂದ ಕೂಡಿರುವುದು. ಊರಿನವರದು ಒಂದು ದಾರಿಯಾದರೇ ನಿಮ್ಮದೇ ಒಂದು ದಾರಿ. ಹಾಗಾಗಿ ಕೆಲವು ವಿಚಾರಗಳಲ್ಲಿ ಸಾಮ್ಯತೆ ಸಾಧಿಸುವುದು ಕಷ್ಟವಾಗುತ್ತದೆ. ಈ ಬಗ್ಗೆ ಎರಡು ಬಾರಿ ಚಿಂತಿಸಿ. ಕಾರ್ಯ ಪ್ರವೃತ್ತರಾಗಿ.
ಸಿಂಹ:- ಅಧಿಕ ತಿರುಗಾಟ ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಆರೈಕೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಕನ್ಯಾ:- ಮನೆಗೆ ಸಂಬಂಧಪಟ್ಟ ಕಾಗದ ಪತ್ರಗಳು ದೊರೆಯುವ ಸಾಧ್ಯತೆ ಇದೆ. ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ಒಡಂಬಡಿಕೆ ಉಂಟಾಗುವುದು. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.
ತುಲಾ:- ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುವುದು. ಮಗನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಡದಿಯ ಸಲಹೆಗಳು ನಿಮ್ಮ ಯಶಸ್ಸಿಗೆ ಕಾರಣವಾಗುವವು.
ವೃಶ್ಚಿಕ:- ಮಕ್ಕಳ ವಿಚಾರವಾಗಿ ಚಿಂತಿತರಾಗಿರುವ ನಿಮಗೆ ಗುರುವಿನ ಕಾರುಣ್ಯದಿಂದ ಅವರಿಗೆ ಉತ್ತಮ ಕಾಲೇಜಿನಲ್ಲಿ ಸೀಟು ದೊರೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯುವವು.
ಧನುಸ್ಸು:- ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಬಹುದು. ಈ ಬಗ್ಗೆ ಅನ್ಯಮಾರ್ಗ ಅನುಸರಿಸಬೇಕಾಗುವುದು. ಅಯೋಗ್ಯರಿಗೆ ಸಲುಗೆ ಕೊಡಬೇಡಿ ಮತ್ತು ಅಂತರಂಗದ ವಿಷಯಗಳನ್ನು ಬಹಿರಂಗ ಗೊಳಿಸದಿರಿ.
ಮಕರ:- ನಿಮ್ಮ ಕಾರ್ಯಯೋಜನೆಗಳನ್ನು ಸಾಧಿಸಿ ಸಫಲತೆಗೆ ಮುಂದಾಗಲಿದ್ದೀರಿ. ಆದರೆ ಆತುರ ಬೇಡ. ಕೆಲವರಿಗೆ ತಾವು ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಂಭವವಿರುತ್ತದೆ. ಅರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ಕುಂಭ:- ವಿವಾಹ ಅಪೇಕ್ಷಿಗಳು ಮಂಗಳ ವಾರ್ತೆ ಕೇಳುವರು. ಮನೆಯಲ್ಲಿನ ಸಂಭ್ರಮದ ವಾತಾವರಣ ಮನಸ್ಸಿಗೆ ಮುದ ನೀಡುವುದು. ಬಂಧುಗಳು ನಿಮ್ಮ ಗುಣಗಾನ ಮಾಡುವರು.
ಮೀನ:- ಹೆಚ್ಚು ಲವಲವಿಕೆಯಿಂದ ಇರಬಹುದಾಗಿದೆ. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಬೆಂಗಾವಲಿಗೆ ಇರುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.