ಕುಮಟಾ: ಬಡತನ ಎನ್ನುವುದು ಶಾಪವಲ್ಲ ಅದೊಂದು ಅವಕಾಶ.. ಬಡತನವಿದ್ದಾಗ ಅವನಲ್ಲಿ ಬೆಳೆಯಬೇಕು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಉದ್ಭವವಾಗುತ್ತದೆ.. ಮುಂದೆ ಬೆಳೆದಾಗ ಆತ ಸಮಾಜಕ್ಕೆ ನೆರವಾಗಲು ಹಿಂದೇಟು ಹಾಕುವುದಿಲ್ಲ ಎಂದು ಉದ್ಯಮಿ ಸುಬ್ರಾಯ ವಾಳ್ಕೆ ಕುಮಟಾದ ಅಳ್ವೆಕೊಡಿಯ ಅಕ್ಷಯ ಶಿಕ್ಷಣ ಸಂಸ್ಥೆ ಯ ನಿರ್ಮಲಾ ಕಾಮತ್ ಪ್ರೌಢಶಾಲೆ ಯ ವಾರ್ಷಿಕ ಸ್ನೇಹ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡುತ್ತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಶಾಲೆಯಲ್ಲಿ ಶಿಕ್ಷಣ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು..
ವಾರ್ಷಿಕ ಸ್ನೇಹ ಸಮ್ಮೇಳನ ದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ಯ ಅಧ್ಯಕ್ಷ ರೂ ಆಗಿರುವ ಎಚ್ ಎನ್ ನಾಯ್ಕ ವಹಿಸಿದ್ದರು.. ವೇದಿಕೆಯಲ್ಲಿ ಕಲಭಾಗ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷ ನಾಯ್ಕ, ರಮೇಶ್ ಉಪಾಧ್ಯಾಯ ಹಾಗೂ ಇತರರು ಉಪಸ್ಥಿತರಿದ್ದರು..
ವಾಳ್ಕೆಯವರು ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಪರೀಕ್ಷೆ ಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು…