ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಸಂಸ್ಥಾನದವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ  ಶ್ರೀ ಜಿ ಕೆ ಹೆಗಡೆ ಇವರ ಮೇಲೆ  ಆಸಿಡ್ ಧಾಳಿ ಮಾಡಲು ಸಂಚು ನಡೆದಿದೆ . 


ದಿನಾಂಕ 05-01-2019 ರಂದು ರಾತ್ರಿ 11.00 ಘಂಟೆ ಸುಮಾರಿಗೆ ಶ್ರೀ ಜಿ ಕೆ ಹೆಗಡೆಯವರು ಅಮಾವಾಸ್ಯೆ ರಥೋತ್ಸವ ಮುಗಿಸಿ ದೇವಾಲಯದಿಂದ ವಸತಿಗೆ ನಡೆದು ಹೋಗತ್ತಿರುವಾಗ ಶ್ರೀ ವಿಶ್ವನಾಥ ಫಣಿರಾಜ್ ಗೋಪಿ ಇವರು ಬೈಕಿನಲ್ಲಿ ಬಂದು : “ಜಿ ಕೆ ಹೆಗಡೆಯವರೇ, ನಿಮಗೆ ಆಸಿಡ್ ಹಾಕಲು ಗೋಕರ್ಣದಲ್ಲಿ  ತಯಾರಿ ನಡೆದಿದೆ . ಆಸಿಡ್ ಬಾಟಲಿಯನ್ನು ತಂದು ಇಟ್ಟಿದ್ದಾರೆ . ಇದರಲ್ಲಿ ಗೋಕರ್ಣದ ಕೆಲವರು ಇದ್ದಾರೆ. ನೀವು ಬಹಳ ಎಚ್ಚರಿಕೆಯಿಂದ ಇರಬೇಕು” ಎಂದು ಹೇಳಿ ಹೋಗಿದ್ದಾರೆ . 

RELATED ARTICLES  ಕುಮಟಾದಲ್ಲಿ ನಿಲ್ಲದ ಕೊರೋನಾ ಆರ್ಭಟ: ಒಂದೇ ದಿನ ಅರ್ಧ ಶತಕದ ಸನಿಹ ಬಂದ ಪಾಸಿಟೀವ್ ಪ್ರಕರಣ
Screenshot 20190106 150014 1


ಈ ಬಗ್ಗೆ ಶ್ರೀ ಜಿ ಕೆ ಹೆಗಡೆಯವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ  ರಕ್ಷಣೆ ಕೋರಿ ದೂರು ದಾಖಲಿಸಿದ್ದಾರೆ . ಈ ಹಿಂದೆ ನಕಲಿ ಸಿ ಡಿ ಕೇಸ್ ಕೇಸಿನಲ್ಲಿ ದೂರು ದಾಖಲಿಸಿದಾಗ  ಶ್ರೀ ಜಿ ಕೆ ಹೆಗಡೆಯವರಿಗೆ  ಕೊಲೆ ಬೆದರಿಕೆ ಬಂದಿತ್ತು ಮತ್ತು ಬ್ಲಾಕ್ ಮೇಲ್ ಪ್ರಕರಣದಲ್ಲಿಯೂ ಸಹ ಜೀವ ಬೆದರಿಕೆ ಕರೆ ಬಂದಿತ್ತು . 
ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯವು ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದ ವಿರೋಧಿಗಳು ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಇಲ್ಲಿನ ಕಾರ್ಯಕರ್ತರ ಧೃತಿಗೆಡಿಸಲು ಈ ರೀತಿಯ ಷಡ್ಯಂತ್ರ ರೂಪಿಸಿರಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು . 

RELATED ARTICLES  ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸೇಂಟ್ ಥೊಮಸ್ ಪ್ರೌಢಶಾಲೆ ವಿದ್ಯಾರ್ಥಿಗಳು.