ಯಲ್ಲಾಪುರ : ಮನೆಯ ಸಮೀಪದ ಬೇಣದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕರಡಿಯೊಂದು ಏಕಾಏಕಿ ದಾಳಿ ಮಾಡಿ ವ್ಯಕ್ತಿಯೋರ್ವನನ್ನು ಗಂಭೀರ ಗಾಯಗೊಳಿಸಿರುವ ಘಟನೆ ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯ ಗೋಸ್ಮನೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 10-00 ಘಂಟೆಯ ಸುಮಾರಿಗೆ ನಡೆದಿದೆ.

ಗೋಸ್ಮನೆ ಗ್ರಾಮದ ರೈತ ಮೋಹನ ಶೇಷು ಮರಾಠಿ (45) ಕರಡಿ ದಾಳಿಯಿಂದ ಗಾಯ ಗೊಂಡಿರುವ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಆತನ ಮುಖ, ತಲೆಯ ಮುಂಭಾಗ, ಕುತ್ತಿಗೆಗೆ ಗಂಭಿರ ಗಾಯವಾಗಿದ್ದು, ಮೈ, ಕೈ ಕಾಲುಗಳಿಗೆ ಪರಚಿದ ಗಾಯವಾಗಿದೆ, ಗಾಯಾಳುವನ್ನು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆ.ಎಮ್.ಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕರಡಿ ದಾಳಿಗೊಳಗಾದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಗೆ ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಫಾಲ್ಸ್ ನಲ್ಲಿ ನೀರು ಪಾಲಾದ ಯುವಕ